ಶೆಟ್ರ ಹೊಸ ಪಾರ್ಟಿಗೆ ಸಿದ್ಧತೆ; ಸದ್ಯದಲ್ಲೇ ಅನೌನ್ಸ್ ಆಗಲಿದೆ 'Kirik Party-2'

ಕಿರಿಕ್ ಪಾರ್ಟಿ ನಂತ್ರ ಮತ್ತೊಂದು ಪಾರ್ಟಿ ಮಾಡಲು ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಸಜ್ಜಾಗಿದ್ದಾರೆ.  777ಚಾರ್ಲಿ ಮೂಲಕ ಪ್ರೇಕ್ಷಕರ ಕಣ್ಣಲ್ಲಿ ನೀರಾಕಿಸಿ ರಂಜಿಸಿದ ರಕ್ಷಿತ್ ಈಗ ಪಾರ್ಟಿ ಮೂಡ್ ನಲ್ಲಿದ್ದಾರೆ. 

First Published Aug 31, 2022, 1:34 PM IST | Last Updated Aug 31, 2022, 1:34 PM IST

ಕಿರಿಕ್ ಪಾರ್ಟಿ ನಂತ್ರ ಮತ್ತೊಂದು ಪಾರ್ಟಿ ಮಾಡಲು ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಸಜ್ಜಾಗಿದ್ದಾರೆ. 777ಚಾರ್ಲಿ ಮೂಲಕ ಪ್ರೇಕ್ಷಕರ ಕಣ್ಣಲ್ಲಿ ನೀರಾಕಿಸಿ ರಂಜಿಸಿದ ರಕ್ಷಿತ್ ಈಗ ಪಾರ್ಟಿ ಮೂಡ್ ನಲ್ಲಿದ್ದಾರೆ. ಯೆಸ್ ಪ್ರೇಕ್ಷಕರ ಜೊತೆ ಪಾರ್ಟಿ ಮಾಡಲು ರೆಡಿ ಆಗಿದ್ದಾರೆ ಸಿಂಪಲ್ ಸ್ಟಾರ್. ಕಿರಿಕ್ ಪಾರ್ಟಿ ಚಿತ್ರ ಇಂಡಸ್ಟ್ರಿ ಹಿಟ್ ಆಗಿದಷ್ಟೇ ಅಲ್ಲ, ಸಿನಿಮಾ ಕಲಾವಿದರ ಲೈಫ್ ನಲ್ಲಿ ಏನೇನೋ ಮಾಡಿ ಬಿಡ್ತು. ಅದ್ರ ಜೊತೆಗೆ ಒಂದಷ್ಟು ಜನರಿಗೆ ಹೆಸರು ಕೂಡ ತಂದುಕೊಡ್ತು. ಒಂದಿಷ್ಟು ಕಲಾವಿದರ ಟೆಕ್ನಿಷಿನ್ಸ್ ಈ ಚಿತ್ರದಿಂದಲೇ ಸ್ಟಾರ್ ಆದ್ರು. ಈಗ ಅದೇ ಹಾದಿಯಲ್ಲಿದೆ ರಕ್ಷಿತ್ ಅವ್ರ ಪರಂವಃ ಸ್ಟುಡಿಯೋಸ್. ಪರವಃ ಸ್ಟುಡಿಯೋಸ್ ನೀಡಿರುವ ಸುಳಿವು ಕಿರಿಕ್ ಪಾರ್ಟಿ-2 ಬಗ್ಗೆ ಎನ್ನುವುದು ಅಭಿಮಾನಿಗಳ ಕುತೂಹಲ.  ಸದ್ಯದಲ್ಲೇ ಸೂಪರ್ ಹಿಟ್ ಕಿರಿಕ್ ಪಾರ್ಟಿ  ಸಿನಿಮಾದ ಸೀಕ್ವೆಲ್ ಅನೌನ್ಸ್ ಆಗಲಿದೆ.