Asianet Suvarna News Asianet Suvarna News

ಕಾಳಿಯಾದ ಸ್ಯಾಂಡಲ್​ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ: ಉಗ್ರ ವೈಯ್ಯಾರದಲ್ಲಿ ನಡೆದು ಬಂದ ಭೈರಾದೇವಿ

ಕಾಳಿ ಆಗಿ ರುದ್ರಾವತಾರ ತಾಳಿರೋ ರಾಧಿಕಾನ ನೋಡಿದ್ರೆ, ಬೆಚ್ಚಿ ಬೀಳ್ತೀರಾ..? ಅಬ್ಬಾ, ಆ ವೇಷ, ಆ ನೃತ್ಯ, ಕಣ್ಣಲ್ಲೇ ಬೆಂಕಿ ಚೆಂಡುಗಳನ್ನ ಉಗುಳುತ್ತಿರೋ ದೃಶ್ಯ, ಇದನ್ನೇಲ್ಲಾ ನೋಡ್ತಿದ್ರೆ,. ಅವರ ಮೈ ಮೇಲೆ ನಿಜಕ್ಕೂ ದೇವಿ ಆಹ್ವಾಹನೆ ಆಗಿದೆಯೇನೋ ಅನ್ನುವಂತಿದೆ.

First Published Sep 12, 2024, 4:32 PM IST | Last Updated Sep 12, 2024, 4:32 PM IST

ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ, ಈಗ ಭೈರಾದೇವಿ ಆಗಿರೊದು ಗೊತ್ತಿರೋ ವಿಚಾರ.. ಈಗಾಗ್ಲೇ ಬೈರಾದೇವಿಯ ಲುಕ್ ಕಂಡು ಅವರ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ.. ಈ ನಡುವೆ ಕಾಳಿ ಸಾಂಗ್ ರಿವೀಲ್ ಆಗಿದ್ದು, ಕರುನಾಡಿನಲ್ಲಿ ಸೆನ್ಸೇಷನಲ್ ಸೃಷ್ಟಿಸಿದೆ. ರಾಧಿಕಾ ಕುಮಾರಸ್ವಾಮಿ.. ಸ್ಯಾಂಡಲ್‌ವುಡ್‌ನ ಸ್ವೀಟಿ.. ಆಕೆ ಅದೆಷ್ಟು ಚೆಂದವತಿನೋ, ಅಷ್ಟೇ ಅದ್ಭುತ ನಟಿ.. ಗಾಂಧಿನರದಲ್ಲಿ ಆಗೋಮ್ಮೆ ಈಗೊಮ್ಮೆ ಕಾಣಿಸಿಕೊಳ್ಳೋ ಈ ಬ್ಯೂಟಿಫುಲ್ ಸ್ವೀಟಿ, ಸದ್ಯ ಭೈರಾದೇವಿಯ ಅವತಾರ ತಾಳಿಸಿದ್ದಾರೆ. ಈಗಾಗ್ಲೇ ಭೈರಾದೇವಿ ಝಲಕ್ ಹೇಗಿರಲಿದೆ ಅನ್ನೋ ಪರಿಚಯವನ್ನ ಚಿತ್ರತಂಡ ಮಾಡಿಕೊಟ್ಟಿದೆ. ಹೀಗಿರುವಾಗ್ಲೇ ಚಿತ್ರದ ಕಾಳಿ ಸಾಂಗ್ ಹೊರ ಬಂದಿದ್ದು, ಕರುನಾಡಿನಾಧ್ಯಂತ ಧೂಳ್ ಎಬ್ಬಿಸ್ತಿದೆ. ಅಬ್ಬಾ ನಿಜಕ್ಕೂ ಈ ಸಾಂಗ್ ನೊಡ್ತಿದ್ರೆ, ಮೈ ಝಮ್ ಎನ್ನುತ್ತೆ.

ಕಾಳಿ ಆಗಿ ರುದ್ರಾವತಾರ ತಾಳಿರೋ ರಾಧಿಕಾನ ನೋಡಿದ್ರೆ, ಬೆಚ್ಚಿ ಬೀಳ್ತೀರಾ..? ಅಬ್ಬಾ, ಆ ವೇಷ, ಆ ನೃತ್ಯ, ಕಣ್ಣಲ್ಲೇ ಬೆಂಕಿ ಚೆಂಡುಗಳನ್ನ ಉಗುಳುತ್ತಿರೋ ದೃಶ್ಯ, ಇದನ್ನೇಲ್ಲಾ ನೋಡ್ತಿದ್ರೆ,. ಅವರ ಮೈ ಮೇಲೆ ನಿಜಕ್ಕೂ ದೇವಿ ಆಹ್ವಾಹನೆ ಆಗಿದೆಯೇನೋ ಅನ್ನುವಂತಿದೆ.. ಸಾಂಗ್ ನೊಡಿದವ್ರು ಮತ್ತೆ ಮತ್ತೆ ಕಣ್ತುಂಬಿಕೊಳ್ತಿದ್ದಾರೆ. ಅಪ್‌ಕೋರ್ಸ್ ಇಂದು ನಾವೇಲ್ಲಾ ಹಾಡಿನ ವೈಭದ ಬಗ್ಗೆ ಕೊಂಡಾಡ್ತಿದ್ದೀವಿ.. ಆದ್ರೆ ಅದರ ಹಿಂದಿನ ಶ್ರಮ ಇದೆಯಲ್ಲಾ ಅದು ನಮ್ಮೆಲ್ಲರನ್ನ ಎಚ್ಚರಗೊಳಿಸುತ್ತೆ.. ಕಾಳಿ ವೇಷವನ್ನ ಹಾಕೋದು ಅಷ್ಟು ಈಸಿಯಾದ ಮಾತಲ್ಲಾ.. ಒಂದೋ ಎರಡೋ ದಿನ ಆದ್ರೆ ಓಕೆ,, ಬರೋಬ್ಬರಿ ಒಂದು ವರೆ ತಿಂಗಳು ಈ ಪಾತ್ರಕ್ಕಾಗಿ ರಾಧಿಕಾ ಕುಮಾರಸ್ವಾಮಿ ಪಟ್ಟಿರೋ ಪಾಡು ಅವರಿಗಷ್ಟೇ ಗೊತ್ತು.. ಇಡೀ ಸಾಂಗ್ ಅನ್ನ ಸ್ಮಶಾಣದಲ್ಲೇ ಶೂಟ್ ಮಾಡಿದ್ದಾರೆ. ಇನ್ನು ಜಸ್ಟ್ ಮೇಕಪ್ ಹಾಕಿಕೊಳ್ಳೋದಿಕ್ಕೆ ಅರ್ಧ ದಿನ ಬೇಕಾಗುತ್ತಿತ್ತಂತೆ.. 

ಅದಕ್ಕಾಗಿ ಸುಮಾರು ೨೦ ಜನರ ಮೇಕಪ್ ಟೀಂ ಪ್ರತೀದಿನ ವರ್ಕ್ ಮಾಡಿದ್ದಾರೆ. ಈ ಸಾಂಗ್ ಶೂಟಿಂಗ್ ಸಹ ಅಷ್ಟು ಈಸಿಯಾಗಿ ಅಗಿ ಆಗಿಲ್ಲಾ.. ಪ್ರತೀದಿನ ಒಂದಲ್ಲಾ ಒಂದು ಅಡಚಣೆಗಳು.. ಅದೆಲ್ಲವನ್ನ ಮೀರಿ ಇಂದು ಅಭಿಮಾನಿಗಳ ಮುಂದೆ ನಿಂತಿದೆ ಚಿತ್ರತಂಡ.. ಮೋಹನ್ ಕೊರಿಗೋಗ್ರಫಿಯಲ್ಲಿ ಈ ಹಾಡು ಚಿತ್ರೀಕರಣಗೊಂಡಿದ್ದು,  ಶ್ರೀಜೈ ಅವರ ಸಾಹಿತ್ಯ ಹಾಗು ಸೆಂತಿಲ್ ಪ್ರಶಾಂತ್‌ರ ಸಂಗೀತ ಇದೆ.. ಇನ್ನು ಅಷ್ಟೇ ಅದ್ಭುತವಾಗಿ ತಮ್ಮ ಕ್ಯಾಮರಾ ಕಣ್ಗಳಲ್ಲಿ ಸೆರೆ ಹಿಡಿದಿದ್ದಾರೆ ಜೆ.ಎಸ್ ವಾಲಿ. ಇದೊಂದು ಅಘೋರಿ ಬೇಸ್ಡ್ ಸಿನಿಮಾ ಆಗಿದ್ದು, ಖ್ಯಾತ ನಿರ್ದೇಶಕ ಶ್ರೀಜೈ ಆಕ್ಷನ್ ಕಟ್ ಹೇಳಿದ್ದಾರೆ. ಬಾರತದಲ್ಲಿ ಮೊದಲ ಅಘೋರಿ ಹೆಣ್ಣುಮಗಳ ಕಥೆ ಹೇಳ್ತಿರೋ ಸಿನಿಮಾ.. ಅದಕ್ಕಾಗಿಸ ಆಕಷ್ಟು ರೀಸರ್ಜ್ ಮಾಡಿ ಈ ಸಿನಿಮಾ ಮಾಡಿದೆ ಚಿತ್ರತಂಡ.

ಚಿತ್ರದಲ್ಲಿ ಹಾರರ್ ಸಹ ಬ್ಲೆಂಡ್ ಆಗಿದ್ದು, ಅಭಿಮಾನಿಗಳಿಗೆ ಸಾಕಷ್ಟು ತ್ರಿಲ್ ಕೊಡೋದು ಗ್ಯಾರೆಂಟಿ ಅಂತಿದೆ ಚಿತ್ರತಂಡ. ರಾಧಿಕಾ ಕುಮಾರಸ್ವಾಮಿ ಕೆರಿಯರ್‌ನಲ್ಲೇ ಇದೊಂದು ಟಫ್ ಅಂಡ್ ಅಮೇಜಿಂಗ್ ಸಿನಿಮಾ.. ಇಲ್ಲಿನ ಮತ್ತೊಂದು ಹೈಲೆಟ್ ಅಂದ್ರೆ ಸ್ಯಾಂಡಲ್‌ವುಡ್ ಮಿಸ್ಟರ್ ಫರ‍್ಫೆಕ್ಷ್‌ನಿಸ್ಟ್ ರಮೇಶ್ ಅರವಿಂದ್.. ಡಿಸಿಪಿಯಾಗಿ ಇಲ್ಲಿ ರಮೇಶ್ ಅರವಿಂದ್ ಮಿಂಚು ಹರೆಸಿದ್ದಾರೆ.. ಚಿತ್ರವನ್ನ ಶಮಿಕಾ ಎಂಟರ್‌ಫ್ರೈಸಸ್‌ನಲ್ಲಿ ರವಿರಾಜ್ ಅಂಡ್ ಯಾಧವ್ ನಿರ್ಮಾಣ ಬಹಳ ಅದ್ದೂರಿಯಾಗಿ ಮಾಡಿದ್ದಾರೆ ಅನ್ನೋದಿಕ್ಕೆ ಈ ದೃಶ್ಯಗಳೇ ಸಾಕ್ಷಿಯಾಗಿವೆ.. ಒಟ್ನಲ್ಲಿ ಕಾಳಿ ಹಾಡಿನ ಮೂಲಕ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ಭೈರಾದೇವಿ ಅಕ್ಟೋಬರ್ ಫಸ್ಟ್ ವೀಕ್‌ನಲ್ಲಿ ಥಿಯೇಟ್‌ಗಳಲ್ಲಿ ದರ್ಶನ ಕೊಡಲಿದ್ದು, ಏನೆಲ್ಲಾ ಮ್ಯಾಜಿಕ್ ಕ್ರಿಯೇಟ್ ಆಗಲಿದೆ ಅನ್ನೋದನ್ನ ಕಾದುನೊಡ್ಬೇಕಿದೆ.

Video Top Stories