ನಾನು ಅಪ್ಪು ಜೊತೆಯಾಗಿ ಹಾಡೋ ಯೋಜನೆ ಇತ್ತು, ದೊಡ್ಡ ಕನ್ನಡ ಕಾರ್ಯಕ್ರಮ ಪ್ಲಾನ್ ಮಾಡಿದ್ವಿ ಎಂದ ಸಂಸದ ಸೂರ್ಯ

  • ಪುನೀತ್ ರಾಜ್‌ಕುಮಾರ್(Puneeth Rajkumar) ಸಾವಿನ ಬಗ್ಗೆ ತೇಜಸ್ವಿ ಸೂರ್ಯ ಪ್ರತಿಕ್ರಿಯೆ(Tejasvi Surya)
  • ಹೃದಯಾಘಾತದಿಂದ(Heart Attack) ಕೊನೆಯುಸಿರೆಳೆದ ಅಪ್ಪು(Appu)
First Published Oct 29, 2021, 6:49 PM IST | Last Updated Oct 29, 2021, 6:49 PM IST

ಸಂಸದ ತೇಜಸ್ವಿ ಸೂರ್ಯ(Tejasvi Surya) ಅವರು ನಟ ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿದ್ದ(Delhi) ವೇಳೆ ಸುದ್ದಿ ಸಿಕ್ಕಿತು. ಸುದ್ದಿ ಸುಳ್ಳಾಗಿರಲಿ ಎಂದುಕೊಂಡಿದ್ದೆ. ಪುನೀತ್ ಅವರು ಪ್ರೀತಿ ವಿಶ್ವಾಸದಿಂದ ಜೊತೆಗಿದ್ದರು. ಬೆಂಗಳೂರು ಎರ್ಪೋರ್ಟ್ ಲಾಂಜ್‌ನಲ್ಲಿ ಇಬ್ಬರೂ ಕುಳಿತು ಅರ್ಧ ಗಂಟೆ ಹರಟೆ ಹೊಡೆದಿದ್ದೆವು. ಹೊಸಬರ ಸಿನಿಮಾಗೆ ಭಾರೀ ಬೆಂಬಲಿಸಿದ್ದರು ಎಂದಿದ್ದಾರೆ. ತಾಯಿ ಸಿನಿಮಾನೇ ನೋಡಲ್ಲ. ಆದರೆ ಅಪ್ಪು ಸಿನಿಮಾ ಬಂದಾಗ, ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಎಂದೂ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ.

Puneeth Rajkumar Death: ರಾಜಕೀಯಕ್ಕೂ ಕರೆತರೋಕೆ ನೋಡಿದ್ವಿ, ಅಪ್ಪು ಬಗ್ಗೆ ಡಿಕೆಶಿ ಮಾತು

ಅಪ್ಪು ಜೊತೆ ಹಾಡುಹಾಡಬೇಕೆಂದುಕೊಂಡಿದ್ದೆವು. ನವೆಂಬರ್‌ನಲ್ಲಿ ದೊಡ್ಡ ಕನ್ನಡ ಉತ್ಸವ ಮಾಡಬೇಕೆಂದುಕೊಂಡಿದ್ದೆವು. ಏನು ಹೇಳಬೇಕೆಂದು ತಿಳಿಯುತ್ತಿಲ್ಲ ಎಂದಿದ್ದಾರೆ.