Puneeth Rajkumar: ಕಲ್ಲಂಗಡಿಯಲ್ಲಿ ಅರಳಿದ ಅಪ್ಪುವಿನ 46 ಭಾವಚಿತ್ರಗಳು

ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆ, ಅಭಿಮಾನಿಗಳು ವಿವಿಧ ರೀತಿಯಲ್ಲಿ ಅಪ್ಪುವಿಗೆ ಗೌರವ  ಸಲ್ಲಿಸುತ್ತಿದ್ದಾರೆ.

First Published Oct 29, 2022, 11:58 AM IST | Last Updated Oct 29, 2022, 12:56 PM IST

ಅಪ್ಪು ಸಮಾಧಿ ಬಳಿ ಹಲವಾರು ಅಭಿಮಾನಿಗಳು ಬರುತ್ತಿದ್ದು, ವಿಶೇಷ ರೀತಿಯಲ್ಲಿ ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ. ಬೆಣ್ಣೆ ಹಾಗೂ ಕಲ್ಲಂಗಡಿ ಹಣ್ಣಿನಲ್ಲಿ ಪುನೀತ್‌ ಭಾವಚಿತ್ರವನ್ನು ಅರಳಿಸಿ ಅಭಿಮಾನ ಮೆರೆಯಲಾಗಿದೆ. ಪುನೀತ್‌ ಅವರ 46 ಭಾವಚಿತ್ರಗಳು ಕಲ್ಲಂಗಡಿ ಹಣ್ಣಿನಲ್ಲಿ ಅರಳಿವೆ. 46 ವರ್ಷಕ್ಕೆ ಪುನೀತ್‌ ನಿಧನ ಹೊಂದಿದ ಹಿನ್ನೆಲೆ, ಅವರ ಮೊದಲ ವರ್ಷದಿಂದ 46 ವರ್ಷದವರೆಗಿನ ಫೋಟೋವನ್ನು ಕಲ್ಲಂಗಡಿ ಹಣ್ಣಿನಲ್ಲಿ ಬಿಡಿಸಲಾಗಿದೆ.

ದೀಪಾವಳಿ ಬೆನ್ನಲ್ಲೇ ಪುನೀತ್‌ ‘ಗಂಧದ ಗುಡಿ’ ಹಬ್ಬ; ಎಲ್ಲಾ ಟಿಕೆಟ್ ಸೋಲ್ಡ್ ಔಟ್!