Puneetha Parva; ವೀಲ್ ಚೇರ್‌ನಲ್ಲಿ ಬಂದ ಅಭಿಮಾನಿ, ಅಪ್ಪು ಬಗ್ಗೆ ಹೇಳಿದ್ದೇನು?
ಪುನೀತ ಪರ್ವ ಕಾರ್ಯಕ್ರಮಕ್ಕೆ ಅಭಿಮಾನಿಗಳ ಸಾಗರ ಹರಿದುಬರುತ್ತಿದೆ. ಸ್ಟ್ರೋಕ್ ಆಗಿದ್ದ ಅಭಿಮಾನಿಯೊಬ್ಬ ವೀಲ್ ಚೇರ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ನಟನೆಯ ಕೊನೆಯ ಸಿನಿಮಾ ಗಂಧದ ಗುಡಿ ರಿಲೀಸ್‌ಗೆ ಸಜ್ಜಾಗಿದೆ. ಇದೀಗ ಚಿತ್ರದ ಪ್ರೀ ರಿಲೀಸ್ ಈವೆಂಟ್ ಅದ್ದೂರಿಯಾಗಿ ನಡೆಯುತ್ತಿದೆ. ಬೆಂಗಳೂರಿನ ಪ್ಯಾಲೇಜ್ ಗ್ರೌಂಡ್ ಅದ್ದೂರಿ ಸಮಾರಂಭಕ್ಕೆ ಸಜ್ಜಾಗಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಮುಂದೆ ನಿಂತು ಎಲ್ಲಾ ತಾಯಾರಿ ಮಾಡಿಸುತ್ತಿದ್ದಾರೆ. ಅದ್ದೂರಿ ಈವೆಂಟ್‌ಗೆ ರಾಜ್ಯದ ಮೂಲೇ ಮೂಲೆಯಿಂದ ಅಭಿಮಾನಿಗಳ ಬರುತ್ತಿದ್ದಾರೆ. ಲಕ್ಷಾಂತರ ಮಂದಿ ಭಾಗಿಯಾಗುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ವೀಲ್ ಚೇರ್‌ನಲ್ಲಿ ಬಂದ ಅಭಿಮಾನಿ ಎಲ್ಲರ ಗಮನ ಸೆಳೆದಿದ್ದಾರೆ. ಸ್ಟ್ರೋಕ್ ಆಗಿದ್ದರೂ ಸಹ ಪುನೀತ್ ಕಾರ್ಯಕ್ರಮಕ್ಕೆ ವೀಲ್ ಚೇರ್‌ನಲ್ಲಿಯೇ ಎಂಟ್ರಿ ಕೊಟ್ಟಿದ್ದಾರೆ.