Asianet Suvarna News Asianet Suvarna News

ಸರಳ ಮದುವೆಗೆ ಸೈ ಎಂದ ಚೇತನ್ -ಮೇಘಾ; ಸಾಕ್ಷಿಯಾದ ಪುನೀತ್ ದಂಪತಿ!

ಆ ದಿನಗಳು, ಮೈನಾ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಪಡೆದ ನಟ ಚೇತನ್ ತನ್ನ ಬಹುದಿನದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿನೋಬಾಭಾವೆ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಅದ್ದೂರಿ ಆಡಂಬರಕ್ಕೆ ಬ್ರೇಕ್ ಹಾಕಿ ಸರಳತೆಗೆ ಸಾಕ್ಷಿಯಾದರು. 

ಬೆಂಗಳೂರು (ಫೆ. 04): ಆ ದಿನಗಳು, ಮೈನಾ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಪಡೆದ ನಟ ಚೇತನ್ ತನ್ನ ಬಹುದಿನದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿನೋಬಾಭಾವೆ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಅದ್ದೂರಿ ಆಡಂಬರಕ್ಕೆ ಬ್ರೇಕ್ ಹಾಕಿ ಸರಳತೆಗೆ ಸಾಕ್ಷಿಯಾದರು. 

ಸರಳ ವಿವಾಹಕ್ಕೆ ಸ್ಫೂರ್ತಿಯಾಯ್ತು 'ಆ ದಿನಗಳು' ಚೇತನ್‌- ಮೇಘ ಮದುವೆ!

ವೇದಿಕೆ ಮೇಲೆ ಪ್ರತಿಜ್ಞೆ ಮಾಡುವ ಮೂಲಕ ಮೇಘಾ ಮತ್ತು ಚೇತನ್ ಹೊಸ ಬಾಳಿಗೆ ಅರ್ಥಪೂರ್ಣವಾಗಿ ಕಾಲಿಟ್ಟರು. ಪ್ರತಿಜ್ಞಾ ಮಾತಿಗೆ ನಟ ಪುನೀತ್ ರಾಜ್ ಕುಮಾರ್ ದಂಪತಿ, ಸಾಮಾಜಿಕ ಕಾರ್ಯಕರ್ತೆ ಅಕೈ ಪದ್ಮಶಾಲಿ ಹಾಗೂ ಚೇತನ್ ಮತ್ತು ಮೇಘ ಪೋಷಕರು ಭಾಗಿಯಾದರು.  ಮದುವೆ ಸಂಭ್ರಮ ಹೀಗಿತ್ತು ನೋಡಿ!