ಹಳೆ ಕೇಸ್ಗೆ ಮರುಜೀವ: ಬೇಲ್ ಸಿಕ್ಕರೂ ಮತ್ತೆ ದರ್ಶನ್ ಅಂದರ್ ಆಗೋ ಸಾಧ್ಯತೆ!
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಳ್ಳಾರಿ ಜೈಲು ಸೇರಿರೋ ದರ್ಶನ್, ಬೇಲ್ಗಾಗಿ ಪರದಾಡ್ತಾ ಇದ್ದಾರೆ. ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದಾರೆ. ಆದ್ರೆ ಈ ನಡುವೆ ದರ್ಶನ್ ಮೇಲೆ ದಾಖಲಾದ ಹಳೆಯ ಕೇಸ್ವೊಂದಕ್ಕೆ ಜೀವ ಬಂದಿದ್ದು ದರ್ಶನ್ಗೆ ಹೊಸ ಕಂಟಕ ಎದುರಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಳ್ಳಾರಿ ಜೈಲು ಸೇರಿರೋ ದರ್ಶನ್, ಬೇಲ್ಗಾಗಿ ಪರದಾಡ್ತಾ ಇದ್ದಾರೆ. ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದಾರೆ. ಆದ್ರೆ ಈ ನಡುವೆ ದರ್ಶನ್ ಮೇಲೆ ದಾಖಲಾದ ಹಳೆಯ ಕೇಸ್ವೊಂದಕ್ಕೆ ಜೀವ ಬಂದಿದ್ದು ದರ್ಶನ್ಗೆ ಹೊಸ ಕಂಟಕ ಎದುರಾಗಿದೆ. ಏನದು ಕಂಟಕ.. ಇದ್ರಿಂದ ದರ್ಶನ್ಗೆ ಬೇಲ್ ಸಿಗುವ ಅವಕಾಶವೇ ತಪ್ಪಿ ಹೋಗುತ್ತಾ..? ಮರ್ಡರ್ ಕೇಸ್ನಲ್ಲಿ ಜೈಲು ಸೇರಿರೋ ದರ್ಶನ್ಗೆ ಒಂದಾದ ಮೇಲೊಂದು ಸಂಕಷ್ಟಗಳು ಬಂದು ಬೆನ್ನುಬೀಳ್ತಾ ಇವೆ. 2022ರಲ್ಲಿ ನಿರ್ಮಾಪಕರೊಬ್ಬರಿಗೆ ಜೀವ ಬೆದರಿಕೆ ಒಡ್ಡಿದ ಕೇಸ್ಗೆ ಮರುಜೀವ ಬಂದಿದ್ದು ದರ್ಶನ್ಗೆ ಮತ್ತಷ್ಟು ತಲೆ ನೋವು ತಂದಿದೆ. ಯುವ ನಿರ್ಮಾಪಕ ಭರತ್, ‘ಭಗವಾನ್ ಶ್ರೀಕೃಷ್ಣ ಪರಮಾತ್ಮ’ ಹೆಸರಿನ ಸಿನಿಮಾ ಪ್ರಾರಂಭ ಮಾಡಿದ್ದರು.
ಆ ಸಿನಿಮಾಕ್ಕೆ ದರ್ಶನ್ ಆಪ್ತ ಧ್ರುವನ್ ನಾಯಕ ನಟನಾಗಿದ್ದರು. ಆದರೆ ಕೋವಿಡ್ ಬಂದ ಕಾರಣಕ್ಕೆ ಸಿನಿಮಾದ ಚಿತ್ರೀಕರಣ ನಿಂತು ಹೋಯ್ತು. ಬಳಿಕ ಧ್ರುವನ್, ದರ್ಶನ್ ಬಳಿ ಹೋಗಿ ಅವರ ಕೈಯಿಂದ ಭರತ್ಗೆ ಕರೆ ಮಾಡಿಸಿದ್ದರು. ಸಿನಿಮಾ ನಿಲ್ಲಿಸಿದ್ರೆ ನಿನ್ನನ್ನ ಮುಗಿಸಿಬಿಡ್ತಿನಿ ಅಂತ ದರ್ಶನ್ ಅಬ್ಬರಿಸಿದ್ರು. ಈ ಬಗ್ಗೆ ಬೆಂಗಳೂರಿನ ಕೆಂಗೇರಿ ಠಾಣೆಯಲ್ಲಿ ಭರತ್ ದೂರು ದಾಖಲಿಸಿದ್ರು. ಆಗ ಈ ಕೇಸ್ ಅಷ್ಟೇನೂ ಮಹತ್ವ ಪಡೆದಿರಲಿಲ್ಲ. ಆದ್ರೆ ಯಾವಾಗ ದರ್ಶನ್ ರೇಣುಕಾಸ್ವಾಮಿ ಮರ್ಡರ್ ಮಾಡಿ ಜೈಲಿಗೆ ಹೋದ್ರೋ , ನಿರ್ಮಾಪಕ ಭರತ್ ಬೆಚ್ಚಿಬಿದ್ದಿದ್ರು. ಈತ ಕೊಲೆ ಮಾಡೋದಕ್ಕೂ ಹೇಸುವ ವ್ಯಕ್ತಿ ಅಲ್ಲ ಅಂದುಕೊಂಡು ತಮ್ಮ ಕೇಸ್ನ ಇತ್ಯರ್ಥ ಪಡಿಸಿ ಅಂತ ಪೊಲೀಸರಿಗೆ ದುಂಬಾಲು ಬಿದ್ದಿದ್ರು. ಇದೀಗ ಈ ಕೇಸ್ನಲ್ಲಿ ಪೊಲೀಸರು NCR ದಾಖಲು ಮಾಡಿದ್ದಾರೆ.
ಅಸಲಿಗೆ ನಿರ್ಮಾಪಕ ಭರತ್ಗೆ ಜೀವ ಬೆದರಿಕೆ ಹಾಕಿದ್ದು ದರ್ಶನ್ನೇ ಅನ್ನೋದು ಪ್ರೂವ್ ಅದ್ರೆ, ಅವರಿಗೆ ಸಂಕಷ್ಟ ಎದುರಾಗಲಿದೆ. ನಿರ್ಮಾಪಕ ಭರತ್ ಈ ವಿಚಾರದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ದರ್ಶನ್ ಮೇಲೆ ಮತ್ತೆ ಬಂಧನ ವಾರೆಂಟ್ ಇಶ್ಯೂ ಆಗೋ ಸಾಧ್ಯತೆ ಇದೆ. ಈಗಾಗ್ಲೇ ರೇಣುಕಾಸ್ವಾಮಿ ಕೇಸ್ನಲ್ಲಿ ಅಪಹರಣ, ಮಾರಣಾಂತಿಕ ಹಲ್ಲೆ ಮತ್ತು ಸಾಕ್ಷಿ ನಾಶ ಕೇಸ್ಗಳು ದರ್ಶನ್ ಮೇಲೆ ದಾಖಲಾಗಿದ್ದು ಬೇಲ್ ಸಿಕ್ತಾ ಇಲ್ಲ. ಈ ನಡುವೆ ಈ ಜೀವಬೆದರಿಕೆ ಕೇಸ್ ಬೇರೆ ರೀ ಓಪನ್ ಆದ್ರೆ ದರ್ಶನ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕೋದು ಫಿಕ್ಸ್. ಒಂದು ವೇಳೆ ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಬೇಲ್ ಸಿಕ್ಕರೂ, ಈ ಬೆದರಿಕೆ ಕೇಸ್ನಲ್ಲಿ ದರ್ಶನ್ ಮತ್ತೆ ಅಂದರ್ ಆಗೋ ಸಾದ್ಯತೆ ಇದೆ. ಅಲ್ಲಿಗೆ ದರ್ಶನ್ಗೆ ಅದ್ಯಾಕೋ ಕೃಷ್ಣ ಜನ್ಮಸ್ಥಾನದಿಂದ ಮುಕ್ತಿ ಸಿಗುವ ಲಕ್ಷಣಗಳು ಕಾಣ್ತಾನೇ ಇಲ್ಲ.