Asianet Suvarna News Asianet Suvarna News

Gandhada Gudi ಗಂಧದ ಗುಡಿಯಲ್ಲಿ ಅಪ್ಪು ಸರ್ ವಿಶ್ವಮಾನವ: ನಟ ಪ್ರೇಮ್

ಗಂಧದ ಗುಡಿ ಸಿನಿಮಾ ನೋಡಬೇಕೆಂದು ನಾನು ಬಂದಿಲ್ಲ, ಅಪ್ಪು ಸರ್ ಜೊತೆ ಕಾಡನ್ನು ಟ್ರೆಕ್ಕಿಂಗ್ ಮಾಡಬೇಕೆಂದು ಬಂದೆ ಎಂದು ನಟ ಪ್ರೇಮ್ ತಿಳಿಸಿದರು‌.
 

First Published Oct 28, 2022, 11:09 AM IST | Last Updated Oct 28, 2022, 12:48 PM IST

ಗಂಧದ ಗುಡಿ ಪ್ರೀಮಿಯರ್ ಶೋ ವೀಕ್ಷಿಸಿ ಮಾತನಾಡಿದ ಅವರು, ಅಪ್ಪು ಸರ್ ಜೊತೆ ಶಬರಿ ಮಲೆಗೆ ಹೋಗುವಾಗ ನಾವು ಕಾವಿ ಹಾಕಿಕೊಂಡು ಬೆಟ್ಟ ಹತ್ತುತ್ತಿದ್ದೆವು. ಅದೇ ಒಂದು ಅನುಭವದ ರೀತಿಯಲ್ಲಿ ಅವರ ಜೊತೆ ಕಾಡು ನೋಡಬೇಕೆನ್ನುವ ಆಸೆ, ಅದಕ್ಕೆ ಹೀಗೆ ಟ್ರೆಕ್ಕಿಂಗ್ ಡ್ರೆಸ್ ಹಾಕಿಕೊಂಡು ಬಂದಿದಿನಿ. ಈ ಮುಖಾಂತರ ಆಸೆಯನ್ನು ತೀರಿಸಿಕೊಂಡಿದ್ದೇನೆ ಎಂದರು. ಧನ್ಯವಾದ ಅಪ್ಪು ಸರ್‌, ಅದ್ಭುತವಾದಂತಹ ಕಾಡನ್ನು ತೋರಿಸಿದ್ರಿ. ನದಿ, ಸಮುದ್ರವನ್ನು ತೋರಿಸಿದ್ರಿ. ಪ್ರಾಣಿ ಹಾಗೂ ಪಕ್ಷಿಗಳನ್ನು ತೋರಿಸಿದ್ರಿ. ನೆಕ್ಸ್ಟ್ ಜನರೇಷನ್‌ಗೆ ಅದ್ಭುತವಾದ ಗಿಫ್ಟ್ ಕೊಟ್ಟಿದ್ದೀರಿ ಎಂದರು. ಕರ್ನಾಟಕ ಜನತೆಗೆ ಒಂದು ವಿನಂತಿ, ಸಿನಿಮಾ ನೋಡಲು ಬರುವಾಗ ಒಬ್ಬರೇ ಬರಬೇಡಿ. ಮಕ್ಕಳನ್ನು ಕರೆದುಕೊಂಡು ಬನ್ನಿ. ಮಕ್ಕಳಿಗೆ ಅದ್ಭುತವಾದಂತಹ  ಗಿಫ್ಟ್ ಕೊಡಬೇಕು ಅಂದ್ರೆ, ಈ ಸಿನಿಮಾ ತೋರಿಸಿ. ವಿಶ್ವಮಾನವನಾಗಿ ಅಪ್ಪು ಸರ್ ಸಿನಿಮಾದಲ್ಲಿ ಮೆರೆದಿದ್ದಾರೆ. ಇದು ಯಾವುದೇ ಸಿನಿಮಾಗಿಂತ ಕಡಿಮೆ ಇಲ್ಲ ಎಂದರು.

ಹೆಂಡತಿಯಿಂದ ಮನೆಗೆಲಸ ಮಾಡಿಸೋದು ಕ್ರೌರ್ಯ ಅಲ್ಲ: ಬಾಂಬೆ ಹೈಕೋರ್ಟ್

Video Top Stories