Asianet Suvarna News Asianet Suvarna News

ಸಿನಿಮಾ ಬಿಟ್ರೆ ಅವರಿಗೆ ಬೇರೆ ಲೈಫೇ ಇಲ್ಲ; ರಿಷಬ್ ಶೆಟ್ಟಿ ಬಗ್ಗೆ ಪತ್ನಿ ಪ್ರಗತಿ ಶೆಟ್ಟಿ ಮಾತು

ರಿಷಬ್ ಶೆಟ್ಟಿ ನಿರ್ದೇಶನ ಮಾಡಿ, ನಟಿಸಿರುವ ಕಾಂತಾರ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರಗತಿ ಶೆಟ್ಟಿ ಮಾತನಾಡಿದ್ದಾರೆ. 

Oct 3, 2022, 12:48 PM IST

ರಿಷಬ್ ಶೆಟ್ಟಿ ನಿರ್ದೇಶನ ಮಾಡಿ, ನಟಿಸಿರುವ ಕಾಂತಾರ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರಮಂದಿರಗಳಲ್ಲಿ ಕಾಂತಾರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ರಿಷಬ್ ಶೆಟ್ಟಿ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಿನಿಮಾದ ಬಗ್ಗೆ ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದು ಚಿತ್ರದ ಅನುಭವ ಬಿಚ್ಚಿಟ್ಟಿದ್ದಾರೆ. ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ತುಂಬಾ ಖುಷಿಯಾಗುತ್ತಿದೆ. ನಿದ್ದೆನೆ ಬರ್ತಿಲ್ಲ ಎಂದು ಪ್ರಗತಿ ಶೆಟ್ಟಿ ಹೇಳಿದರು. ರಿಷಬ್ ಯಾವಾಗಲು 200 ಪರ್ಸೆಂಟ್ ಶ್ರಮ ಹಾಕುತ್ತಾರೆ. ಅವರಿಗೆ ಬೇರೆ ಲೈಫ್ ಇಲ್ಲ. ಸಿನಿಮಾನೆ ಲೈಫ್ ಎಂದು ಹೇಳಿದ್ದಾರೆ. ದೈವನೆ ಅವರಿಗೆ ಈ ಶಕ್ತಿ ಕೊಟ್ಟಿದೆ ಎಂದು ಪ್ರಗತಿ ಹೇಳಿದರು.