ಪುನೀತ್ ಬಗ್ಗೆ ಅಕ್ಕಂದಿರ ಅಕ್ಕರೆ: ಭಾವುಕರಾದ ಸಹೋದರಿಯರು
ಅಪ್ಪುವಿಗೆ ತಿಂಡಿ ಅಂದ್ರೆ ತುಂಬಾ ಇಷ್ಟ. ಚಿಕನ್ ಫ್ರೈಡ್ ರೈಸ್, ಚಿಲ್ಲಿ ಚಿಕನ್ ಅಂದ್ರೆ ಪ್ರೀತಿಯಾಗಿತ್ತು ಎಂದು ಪುನೀತ್ ಅಕ್ಕಂದಿರಾದ ಪೂರ್ಣಿಮಾ ಮತ್ತು ಲಕ್ಷ್ಮಿ ಹೇಳಿದರು.
ತಮ್ಮನ ನೆನಪನ್ನು ಮೆಲುಕು ಹಾಕಿದ ಪೂರ್ಣಿಮಾ ಮತ್ತು ಲಕ್ಷ್ಮಿ, ಅಪ್ಪು ಹುಟ್ಟಿದಾಗಿನಿಂದ ಮನೆಯಲ್ಲಿ ಸಂತೋಷದ ವಾತಾವರಣ ಇತ್ತು ಎಂದು ಭಾವುಕರಾದರು. ಮನೆಯಲ್ಲಿ ಎಲ್ಲಾ ಮಕ್ಕಳಿಗೂ ಅಪ್ಪು ಅಂದ್ರೆ ಇಷ್ಟ. ಎಲ್ಲರ ಮಕ್ಕಳು ಅಪ್ಪುವಿಗೆ ಒಂದೇ. ಅಪ್ಪುವಿನ ಮೇಲೆ ಅಭಿಮಾನಿಗಳ ಅಭಿಮಾನವನ್ನು ನೋಡಿ ಮನಸ್ಸು ಭಾರವಾಗುತ್ತದೆ. ಅಪ್ಪುವಿಗೆ ಹೀಗೆ ಆಗಬಾರದಾಗಿತ್ತು ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು. ಈ ಇಬ್ಬರು ನಮ್ಮೆಲ್ಲರ ಅಕ್ಕರೆಯ ಅಪ್ಪು ಹುಟ್ಟಿದ್ದನ್ನು ನೋಡಿದ್ದಾರೆ,ಬೆಳದಿದ್ದು ನೋಡಿದ್ದಾರೆ. ತೊದಲು ನುಡಿಗಳನ್ನು ಕೇಳಿದ್ದಾರೆ. ಅಂಬೆಗಾಲು ಇಡುವುದನ್ನು ನೋಡಿದ್ದಾರೆ ಹಾಗೂ ಕೈ ಹಿಡಿದು ನಡೆಸಿದ್ದಾರೆ. ಅಪ್ಪು ತುಂಟಾಟವನ್ನು ನೋಡಿ ನಕ್ಕಿದ್ದಾರೆ ಪೂರ್ಣಿಮಾ ಮತ್ತು ಲಕ್ಷ್ಮಿ.