ಈ ವಾರ ಬೆಳ್ಳಿತೆರೆ ಮೇಲೆ 'ರೆಮೋ' ರಂಗು: ಹೇಗಿರಲಿದೆ 'ಗೂಗ್ಲಿ' ಡೈರೆಕ್ಟರ್ ಜಾದು?
ಇಶಾನ್ ಹಾಗೂ ಆಶಿಕಾ ರಂಗನಾಥ್ ನಟಿಸಿರುವ ರೆಮೋ ಸಿನಿಮಾ ಈ ವಾರ ಬೆಳ್ಳಿತೆರೆ ಮೇಲೆ ಬರೋದಕ್ಕೆ ಸಿದ್ಧವಾಗಿದೆ.
ಪವನ್ ಒಡೆಯರ್ ನಿರ್ದೇಶನದ ರೆಮೋ ಮ್ಯೂಸಿಕಲ್ ಲವ್ ಸ್ಟೋರಿಯಾಗಿದ್ದು, ಸಿನಿಮಾದ ಮ್ಯೂಸಿಕ್ ಯಾವ ಮಟ್ಟಕ್ಕೆ ರಂಜಿಸಲಿದೆ ಅನ್ನೋದಕ್ಕೆ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಹಾಡೇ ಸಾಕ್ಷಿ. ರೆಮೋ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಚೀಫ್ ಗೆಸ್ಟ್ ಆಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಡಿ.ಕೆ ಶಿವಕುಮಾರ್ ಬಂದಿದ್ರು. ಸಿ.ಆರ್ ಮನೋಹ್ ನಿರ್ಮಾಣದಲ್ಲಿ ರೆಮೋ ಅದ್ದೂರಿಯಾಗಿ ಮೂಡಿ ಬಂದಿದ್ದು, ಸಿನಿಮಾಗೆ ಕಿಚ್ಚ ಸುದೀಪ್ ಕೂಡ ಬೆಂಬಲವಾಗಿ ನಿಂತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದು, ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಮ್ಯೂಸಿಕಲ್ ಲವ್ ಸ್ಟೋರಿ ರೆಮೋ ಸಿನಿಮಾ, ಇದೇ ವಾರ ರಾಜ್ಯಾದ್ಯಂತ ಅದ್ದೂರಿ ಯಾಗಿ ರಿಲೀಸ್ ಆಗಲಿದೆ.
Rishabh Shetty: ರಶ್ಮಿಕಾಗೆ ಮುಟ್ಟಿ ನೋಡ್ಕೊಳ್ಳೋ ಹಾಗೆ ತಿರುಗೇಟು ಕೊಟ್ರು ನೋಡಿ ರಿಷಬ್, ಶಭಾಷ್ ಅಂದ್ರು ನೆಟ್ಟಿಗರು!