Asianet Suvarna News Asianet Suvarna News

ಮಾರ್ಚ್ 17ರಂದು ತೆರೆ ಮೇಲೆ 'ಕಬ್ಜ'ನ ಅಬ್ಬರ: ಅಪ್ಪು ನೆನಪಿನ ಜೊತೆ ಉಪ್ಪಿ ಎಂಟ್ರಿ

ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ'ದ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಮಾರ್ಚ್ 17ರಂದು ತೆರೆ ಮೇಲೆ ಅಬ್ಬರಿಸಲಿದೆ.
 

ಕಬ್ಜ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ವಿಶೇಷ ಅಂದ್ರೆ ಕಬ್ಜ ಬಿಡುಗಡೆ ಆಗುತ್ತಿರೋದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಹಾಗೂ ಯುಗಾದಿ ಹಬ್ಬಕ್ಕೆ. ಮಾರ್ಚ್ 17 ಅಪ್ಪು ಹುಟ್ಟಿದ ದಿನ. ಅದೇ ದಿನ ಅಪ್ಪು ನೆನಪಿನ ಜೊತೆ ಥಿಯೇಟರ್ ಅಂಗಳಕ್ಕೆ ಬರ್ತಾ ಇದ್ದಾರೆ ಇಂಡಿಯನ್ ರಿಯಲ್ ಸ್ಟಾರ್ ಉಪೇಂದ್ರ. ಅಪ್ಪು ಜನ್ಮದಿನದ ಪ್ರಯುಕ್ತ ಕಬ್ಜ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ಅದೇ ವಾರದಲ್ಲಿ ಯುಗಾದಿ ಹಬ್ಬ ಬೇರೆ ಇರೋದ್ರಿಂದ ಬೇವು ಬೆಲ್ಲ ತಿಂದು ಕಬ್ಜ ಸಿನಿಮಾ ನೋಡಿ ಆನಂದಿಸೋ ಅವಕಾಶ ಸಿನಿ ರಸಿಕರಿಗೆ ಸಿಗ್ತಾ ಇದೆ.

Video Top Stories