ಪುತ್ರನ ಜೊತೆ ನಿಖಿಲ್ ಮೊದಲ ಗಣೇಶ ಹಬ್ಬ; ಕುಮಾರಸ್ವಾಮಿ ಮನೆಯ ಸಂಭ್ರಮ ಹೇಗಿದೆ ನೋಡಿ
ನಟ, ರಾಜಕಾರಣಿ ನಿಖಿಲ್ ಕುಮಾರ್ ಕುಮಾರ್ ತಮ್ಮ ಮನೆಯಲ್ಲಿ ಅದ್ದೂರಿಯಾಗಿ ಗಣೇಶ ಹಬ್ಬ ಸಂಭ್ರಮಿಸಿದ್ದಾರೆ. ಕುಟುಂಬದ ಜೊತೆ ನಿಖಿಲ್ ಗಣೇಶ ಹಬ್ಬ ಆಚರಿಸಿದ್ದಾರೆ.
ದೇಶದಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ. ಎಲ್ಲೆಲ್ಲೂ ಗಣೇಶ ಮೂರ್ತಿಗಳು ರಾರಾಜಿಸುತ್ತಿವೆ. ಸುಂದರವಾಗಿ ಅಲಂಕಾರ ಮಾಡಿ ಗಣೇಶನ ಕೂರಿಸಿ ಭಕ್ತಿಯಿಂದ ಪೂಜಿಸಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ಕಲಾವಿದರು ಸಹ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ನಟ, ರಾಜಕಾರಣಿ ನಿಖಿಲ್ ಕುಮಾರ್ ತಮ್ಮ ಮನೆಯಲ್ಲಿ ಅದ್ದೂರಿಯಾಗಿ ಗಣೇಶ ಹಬ್ಬ ಸಂಭ್ರಮಿಸಿದ್ದಾರೆ. ಕುಟುಂಬದ ಜೊತೆ ನಿಖಿಲ್ ಗಣೇಶ ಹಬ್ಬ ಆಚರಿಸಿದ್ದಾರೆ. ಪತ್ನಿ ರೇವತಿ, ಪುತ್ರ ಅವ್ಯಾನ್ ದೇವ್ ಗೌಡ ಹಾಗೂ ತಂದೆ-ತಾಯಿ ಜೊತೆ ಗಣೇಶನ ಪೂಜೆ ಮಾಡುತ್ತಿರುವ ವಿಡಿಯೋ ಅಭಿಮಾನಿಗಳ ಗಮನ ಸೆಳೆದಿದೆ.