Puneetha Parva; ಅಪ್ಪು ಸರ್ ಅವರ ಈ ಹಾಡು ಕೇಳದೆ ನನ್ನ ಮಗ ಊಟನೇ ಮಾಡಲ್ಲ- ನಿಖಿಲ್ ಕುಮಾರ್
ಪುನೀತ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ನಿಖಿಲ್ ಕುಮಾರ್ ನನ್ನ ಮಗ ಅಪ್ಪು ಸರ್ ಅವರ ಈ ಹಾಡು ಕೇಳದೆ ಊಟನೇ ಮಾಡಲ್ಲ ಎಂದು ಹೇಳಿದರು.
ಪುನೀತ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ನಿಖಿಲ್ ಕುಮಾರ್, ಅಪ್ಪು ಸರ್ ದೇವತ ಮನುಷ್ಯ ಎಂದು ಹೇಳಿದರು. ಅಶ್ವಿನಿ ಅಕ್ಕ ಫೋನ್ ಮಾಡಿ ಕಾರ್ಯಕ್ರಮಕ್ಕೆ ಕರೆದರು. ನಾನು ಅವರಿಗೆ ಒಂದೇ ಮಾತು ಹೇಳಿದ್ದು, ಇದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ, ನೀವು ಕರೆಯದೆ ಇದ್ರು ಬರುತ್ತಿದ್ದೆ ಅಂತ ಅಕ್ಕನಿಗೆ ಹೇಳಿದೆ ಅಂತ ನಿಖಿಲ್ ಹೇಳಿದರು. ವಿಶೇಷವಾಗಿ ಅಶ್ವಿನಿ ಅವರಿಗೆ ಧನ್ಯವಾದ ತಿಳಿಸಿದರು. ಒಂದು ಕೈಯಲ್ಲಿ ಕೊಟ್ಟಿದ್ದನ್ನು ಮತ್ತೊಂದು ಕೈಯಿಗೆ ಗೊತ್ತಾಗಬಾರದು ಎನ್ನುವ ಹಾಗೆ ಅಪ್ಪು ಸರ್ ನಡೆದುಕೊಂಡು ಬಂದಿದ್ದಾರೆ. ಅಪ್ಪು ಎಲ್ಲೂ ಹೋಗಿಲ್ಲ ಎಲ್ಲರಲ್ಲೂ ಇದ್ದಾರೆ ಎಂದು ಹೇಳಿದರು.