ಪ್ರೀತಿಯ ಮಡದಿಗೆ ಸಮಯ ಕೊಡಲು ಆಗುತ್ತಿಲ್ಲ: ರಿಷಬ್ ಶೆಟ್ಟಿ

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ 2023ರ ಹೊಸ ವರ್ಷವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಆಚರಿಸಿದ್ದಾರೆ.
 

First Published Jan 2, 2023, 5:54 PM IST | Last Updated Jan 2, 2023, 5:54 PM IST

 ಮದುವೆ ಆಗಿ ಏಳು ವರ್ಷವಾದರೂ ಹೆಂಡತಿಗೆ ತುಂಬಾ ಟೈಮ್‌ ಕೊಟ್ಟಿಲ್ಲ ಎಂದು ರಿಷಬ್ ಶೆಟ್ಟಿ ತಿಳಿಸಿದರು‌. ಸಿನಿಮಾದಲ್ಲಿ ಸಂದರ್ಭ ಸಿಕ್ಕಾಗ ಬಿಟ್ರೆ ಸಮಯ ಕೊಟ್ಟಿಲ್ಲ. ಸಿನಿಮಾದಲ್ಲಿ ಕಾಸ್ಟ್ಯೂಮ್‌ ಡಿಸೈನರ್‌ ಆಗಿ ಕೆಲಸ ಮಾಡಲು ಸ್ಟಾರ್ಟ್‌ ಮಾಡಿದ ಮೇಲೆ ಸಿನಿಮಾ ಬಗ್ಗೆ ಮಾತ್ರ ಚರ್ಚೆಯನ್ನು ಮಾಡುತ್ತೇವೆ ಬಿಟ್ರೆ, ಹೆಚ್ಚಿನ ಟೈಮ್‌ ಕೊಟ್ಟಿಲ್ಲ. ಸಿನಿಮಾ ಯಶಸ್ಸು ಕಾಣುತ್ತಾ ಬಂದಂತೆ ಹೊರಗಡೆ ಪ್ರಪಂಚವನ್ನು ಕಳೆದುಕೊಳ್ಳುತ್ತಾ ಬಂದೆ. ಅವಳಿಗೆ ಸಮಯ ಕೊಟ್ಟಿಲ್ಲ. ಒಂದು ಹುಡುಗಿಯಾಗಿ ಸುತ್ತಾಡಬೇಕು ಹಾಗೂ ಆರಾಮಾಗಿ ಎಂದು ಅವಳಿಗೂ ಆಸೆ ಇರುತ್ತೆ. ಆದರೆ ಅವಳಿಗೆ ಕೊಡಬೇಕಾದ ಸಮಯವನ್ನು ಕೊಡಲು ಆಗುತ್ತಿಲ್ಲ ಎಂದು ಹೇಳಿದರು.