Asianet Suvarna News Asianet Suvarna News

ರಿಷಬ್‌ ಶೆಟ್ಟಿಯ ಹೊಸ ಮುಖದ ಅನಾವರಣ: ಇದು ವಿಶೇಷ ಸಂದರ್ಶನ

ಕಾಂತಾರ ಸಿನಿಮಾ ಮೂಲಕ ವಿಶ್ವದಾದ್ಯಂತ ಪ್ರಖ್ಯಾತಿ ಪಡೆದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, 2023ರ ಹೊಸ ವರ್ಷವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌'ನಲ್ಲಿ ಆಚರಿಸಿದ್ದಾರೆ.
 

ರಿಷಬ್ ಶೆಟ್ಟಿ ಅವರಿಗೆ ಮುಖ್ಯ ಸಂಪಾದಕ ಎಡಿಟರ್ ರವಿ ಹೆಗಡೆ ಹಾಗೂ ಸಂಪಾದಕ ಅಜಿತ್‌ ಹನುಮಕ್ಕನವರ್‌ ಪುಷ್ಪವನ್ನು ನೀಡಿ ಸ್ವಾಗತಿಸಿದರು. ರಿಷಬ್ ಶೆಟ್ಟಿ ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಒಂದು ದಾಖಲೆ ಮೇಲೆ ದಾಖಲೆಯನ್ನು ಬರಿತಾ ಹೋದಂತ ವ್ಯಕ್ತಿ. ಅಂತರಾಷ್ಟ್ರಿಯ ಮಟ್ಟದಲ್ಲಿ ದಾಖಲೆಯನ್ನು ಬರೆದ ಸಿನಿಮಾವನ್ನು ಕೊಟ್ಟ ವ್ಯಕ್ತಿ. ಕಳೆದ ಒಂದು ವರ್ಷದಲ್ಲಿ ಸಾಧಿಸಿದ ಎತ್ತರ ಯಾವುದು ಅವರ ತಲೆಗೆ ಹೋಗಿಲ್ಲ. ಅವರು ಇನ್ನು ಕೂಡಾ ನಮ್ಮ ಜೊತೆಯೇ ನಮ್ಮೊಂದಿಗೆ ಇರುವಂತ ವ್ಯಕ್ತಿ‌. ಅವರು ಕಳೆದ ಎರಡ್ಮೂರು ತಿಂಗಳಲ್ಲಿ ಕಾಂತಾರ ಕಾರಣಕ್ಕಾಗಿ ಸಾವಿರಾರು ಸಂದರ್ಶನಗಳನ್ನು ಬಹಳ ಮಾಧ್ಯಮಗಳಿಗೆ ಕೊಟ್ಟಿದ್ದಾರೆ. ಆದ್ರೆ ಇವತ್ತು ಇಲ್ಲಿ ನೋಡುತ್ತಾ ಇರುವುದು ಮಾಮುಲಿ ಯಾವುದೇ ಸಂದರ್ಶನ ಅಲ್ಲ. ರಿಷಬ್‌ ಶೆಟ್ರ ಹೊಸ ಮುಖವನ್ನು ಇಲ್ಲಿ ನೋಡುತ್ತಿರಿ ಎಂದು ರವಿ ಹೆಗಡೆ ಹೇಳಿದರು.

Video Top Stories