ಭಗವಂತ ಇಂತಹ ಹೂವುಗಳನ್ನು ಬೇಗನೆ ಕರೆಸಿಕೊಳ್ಳುತ್ತಾನೆ: ಸ್ಪಂದನಾ ಸಾವಿಗೆ ಮಿಡಿದ ಕೋಡಿಮಠದ ಶ್ರೀಗಳು..!
ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಅಂತಿಮ ದರ್ಶನವನ್ನು ಕೋಡಿಮಠದ ಡಾ. ಶಿವಾನಂದ ಮಹಾಸ್ವಾಮೀಜಿ ಪಡೆದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಒಬ್ಬ ತುಂಟ ಹುಡುಗನ ಕೈಯಲ್ಲಿ ಒಂದು ನೋಣ ಇದ್ದರೆ ಆಡಿಸಿ, ಆಡಿಸಿ ಸಾಯಿಸುತ್ತಾನೆ. ಹಾಗೆಯೇ ಭಗವಂತ ತನ್ನ ಸಂತೋಷಕ್ಕೆ ಈ ಜೀವಗಳನ್ನು ಸಾಕಿ ಸಲುಹಿ, ಬೇಕಾದಾಗ ತೆಗೆದುಕೊಳ್ಳುತ್ತಾನೆ. ಹಾಗೂ ಇಂತಹ ಹೂವುಗಳನ್ನು ಬೇಗನೆ ಕರೆಸಿಕೊಳ್ಳುತ್ತಾನೆ ಎಂದು ಕೋಡಿಮಠದ ಡಾ. ಶಿವಾನಂದ ಮಹಾಸ್ವಾಮೀಜಿ ಹೇಳಿದರು. ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಅಂತಿಮ ದರ್ಶನ ಪಡೆದು ಮಾತನಾಡಿದ ಅವರು, ಶಿವರಾಮ್ ಹಾಗೂ ನಾವು ಸ್ನೇಹಿತರು. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕೋರಿದರು.