ದರ್ಶನ್ ಮತ್ತು ನನ್ನ ನಡುವೆ ಅಂಥದ್ದೇನೂ ಇಲ್ಲ: ಫ್ಯಾನ್ಸ್ ವಾರ್ ಸುಖಾಂತ್ಯ ಮಾಡಿದ ಕಿಚ್ಚ ಸುದೀಪ್

ವರ್ಷಾಂತ್ಯದಲ್ಲಿ ಬಂದಿರೋ ಮ್ಯಾಕ್ಸ್ ಸಿನಿಮಾ ಸ್ಯಾಂಡಲ್​ವುಡ್​ಗೆ ಗೆಲುವಿನ ನಗೆ ತಂದಿದೆ. ಆದ್ರೆ ಮ್ಯಾಕ್ಸ್ ಸಿನಿಮಾದ ಸಕ್ಸಸ್ ಪಾರ್ಟಿನಲ್ಲಿ ಕಿಚ್ಚ ಸುದೀಪ್ ಕತ್ತರಿಸಿದ ಕೇಕ್ ವಿವಾದಕ್ಕೆ ಕಾರಣವಾಗಿತ್ತು. 

First Published Jan 1, 2025, 12:12 PM IST | Last Updated Jan 1, 2025, 12:12 PM IST

ವರ್ಷಾಂತ್ಯದಲ್ಲಿ ಬಂದಿರೋ ಮ್ಯಾಕ್ಸ್ ಸಿನಿಮಾ ಸ್ಯಾಂಡಲ್​ವುಡ್​ಗೆ ಗೆಲುವಿನ ನಗೆ ತಂದಿದೆ. ಆದ್ರೆ ಮ್ಯಾಕ್ಸ್ ಸಿನಿಮಾದ ಸಕ್ಸಸ್ ಪಾರ್ಟಿನಲ್ಲಿ ಕಿಚ್ಚ ಸುದೀಪ್ ಕತ್ತರಿಸಿದ ಕೇಕ್ ವಿವಾದಕ್ಕೆ ಕಾರಣವಾಗಿತ್ತು. ಬಾಸಿಸಮ್ ಕಾಲ ಮುಗೀತು. ಮ್ಯಾಕ್ಸಿಮಮ್ ಮ್ಯಾಕ್ಸ್ ಕಾಲ ಶುರುವಾಯ್ತು ಅಂತ ಬರೆದಿದ್ದರ ಬಗ್ಗೆ ದರ್ಶನ್ ಫ್ಯಾನ್ಸ್ ಗರಂ ಆಗಿದ್ರು. ಇದರ ಬಗ್ಗೆ ಕಿಚ್ಚ ಸುದೀಪ್ ರಿಯ್ಯಾಕ್ಟ್ ಮಾಡಿದ್ದಾರೆ. ದಾಸನ ಫ್ಯಾನ್ಸ್​ಗೆ ಸಂದೇಶವೊಂದನ್ನ ಕೊಟ್ಟಿದ್ದಾರೆ. ಡಿಸೆಂಬರ್ 25ಕ್ಕೆ ತೆರೆಗೆ ಬಂದಿರೋ ಮ್ಯಾಕ್ಸ್ ಸಿನಿಮ ಸೂಪರ್ ಸಕ್ಸಸ್ ಕಂಡಿದೆ. ಬಾಕ್ಸಾಫೀಸ್​​ನಲ್ಲಿ ಸಿನಿಮಾ ಭರ್ಜರಿ ಗಳಿಕೆ ಮಾಡ್ತಾ ಇದ್ದು, ಕಿಚ್ಚ ಸುದೀಪ್ ಫುಲ್ ಖುಷ್ ಆಗಿದ್ದಾರೆ. ಇದೇ ಖುಷಿಯಲ್ಲಿ ಇತ್ತೀಚಿಗೆ ಸುದೀಪ್ ಒಂದು ಕೇಕ್ ಕಟ್ ಮಾಡಿದ್ರು. ನಟ ಪ್ರದೀಪ್ ಆ ಕೇಕ್ ತಂದಿದ್ದು, ಅದರ ಮೇಲೆ ಬಾಸಿಸಂ ಕಾಲ ಮುಗೀತು, ಇನ್ನೇನಿದ್ರೂ ಮ್ಯಾಕ್ಸಿಮಮ್ ಕಾಲ ಶುರು ಅಂತ ಬರೆದಿದ್ರು. 

ಅಭಿಮಾನಿಗಳು ದರ್ಶನ್​ನ ಡಿ ಬಾಸ್ ಅಂತ ಕರೀತಾರೆ. ಸೋ ಇದು ದರ್ಶನ್​ಗೆ ಕೊಟ್ಟಿರೋ ಟಾಂಗ್ ಅಂತ ದಾಸನ ಫ್ಯಾನ್ಸ್ ಗರಂ ಆಗಿದ್ರು. ಈ ವಿಚಾರದಲ್ಲಿ ದರ್ಶನ್ ಹಾಗೂ ಸುದೀಪ್ ಫ್ಯಾನ್ಸ್ ನಡುವೆ ಸೋಷಿಯಲ್ ಮಿಡಿಯಾದಲ್ಲಿ ವಾರ್ ಶುರುವಾಗಿತ್ತು. ಇದರ ಬಗ್ಗೆ ಕಿಚ್ಚ ಮೊದಲ ಬಾರಿ ಮಾತನಾಡಿದ್ದಾರೆ. ನನಗೆ ನನ್ನ ತಂದೆ ಬಿಟ್ರೆ ಬೇರ್ಯಾರು ಬಾಸ್ ಇಲ್ಲ ಅಂದಿರೋ ಸುದೀಪ್, ದರ್ಶನ್ ಮತ್ತು ನನ್ನ ನಡುವೆ ಅಂಥದ್ದೇನೂ ಇಲ್ಲ ಅಂದಿದ್ದಾರೆ. ದರ್ಶನ್ ಬಗ್ಗೆ ಕೊಂಚ ಸಾಫ್ಟ್ ಆಗೇ ಮಾತನಾಡಿದ್ದಾರೆ. ಸೋ ನೋ ದುಷ್ಮನಿ ಅಂತ ಫ್ಯಾನ್ಸ್​ಗೆ ಸಂದೇಶ ಕೊಟ್ಟಿದ್ದಾರೆ. ಒಟ್ಟಾರೆ ವರ್ಷಾಂತ್ಯಕ್ಕೆ ಎಲ್ಲವೂ ಸುಖಾಂತ್ಯವಾಗ್ತಾ ಇರೋ ಹೊತ್ತಲ್ಲಿ ಇದೇನಿದು ಫ್ಯಾನ್ ವಾರ್ ಅಂತ ಎಲ್ಲರೂ ಬೇಸರಿಸಿಕೊಂಡಿದ್ರು. ಆದ್ರೆ ಈ ಬಗ್ಗೆ ಮಾತನಾಡಿ, ಸ್ಪಷ್ಟನೆ ಕೊಟ್ಟು ಈ ವಾರ್ ಗೆ ಮಂಗಳ ಹಾಡಿದ್ದಾರೆ ಕಿಚ್ಚ ಸುದೀಪ್.