ಕಿಚ್ಚನ ಪುತ್ರಿ ಸಾನ್ವಿಗೆ ಕಾಡಿದೆ ನೆಪೊಟಿಸಂ ಭೂತ: ಸುದೀಪ್ ಪುತ್ರಿಯನ್ನ ದ್ವೇಷಿಸಿದ್ದು ಯಾರು?

ಸ್ಯಾಂಡಲ್‌ವುಡ್‌ನ ಸೂಪರ್ ಸ್ಟಾರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಏಕಮಾತ್ರ ಪುತ್ರಿ ಸಾನ್ವಿ ಸುದೀಪ್. ಕಿಚ್ಚನ ಪ್ರಪಂಚ ಯಾವ್ದಾದ್ರು ಇದ್ರೆ ಅದು ಸಾನ್ವಿ ಮಾತ್ರ. ಆದ್ರೆ ಕಿಚ್ಚನ ಮಗಳಿಗೂ ಈಗ ನೆಪೊಟಿಸಂ ಅನ್ನೋ ಭೂತ ಕಾಡಿದೆಯಾ.? ಹೀಗೊಂದು ಡೌಟ್ ಈಗ ಶುರುವಾಗಿದೆ. 

First Published Oct 5, 2022, 1:17 PM IST | Last Updated Oct 5, 2022, 1:17 PM IST

ಸ್ಯಾಂಡಲ್‌ವುಡ್‌ನ ಸೂಪರ್ ಸ್ಟಾರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಏಕಮಾತ್ರ ಪುತ್ರಿ ಸಾನ್ವಿ ಸುದೀಪ್. ಕಿಚ್ಚನ ಪ್ರಪಂಚ ಯಾವ್ದಾದ್ರು ಇದ್ರೆ ಅದು ಸಾನ್ವಿ ಮಾತ್ರ. ಆದ್ರೆ ಕಿಚ್ಚನ ಮಗಳಿಗೂ ಈಗ ನೆಪೊಟಿಸಂ ಅನ್ನೋ ಭೂತ ಕಾಡಿದೆಯಾ.? ಹೀಗೊಂದು ಡೌಟ್ ಈಗ ಶುರುವಾಗಿದೆ. ಅದಕ್ಕೆ ಕಾರಣ ಸುದೀಪ್ ಪುತ್ರಿ ಸಾನ್ವಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರೋ ಆ ವಿಷಯ. ಸಾನ್ವಿ ಸುದೀಪ್ ಹೈದರಾಬಾದ್‌ನಲ್ಲಿ ಓದುತ್ತಿದ್ದಾರೆ. ಅಪ್ಪ ಕಿಚ್ಚನ ಹಾಗೆ ಸಾನ್ವಿ ಬೆಸ್ಟ್ ಸಿಂಗರ್. ಅಷ್ಟೆ ಅಲ್ಲ ಪೇಟಿಂಗ್ನಲ್ಲೂ ಸಾನ್ವಿಯದ್ದು ನೆಕ್ಸ್ಟ್ ಲೆವೆಲ್ ಟ್ಯಾಲೆಂಟ್. ತನ್ನ ಟ್ಯಾಲೆಂಟ್ಅನ್ನ ಸೋಷಿಯಲ್ ಮೀಡಿಯಾ ಮೂಲಕ ಆಗಾಗ ತೆರೆದಿಡೋ ಸಾನ್ವಿ ತಮ್ಮದೇ ಆದ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಇದೀಗ ಕಿಚ್ಚನ ಮುದ್ದಿನ ಮಗಳು ಫಸ್ಟ್ ಟೈಂ ನೆಪೊಟಿಸಂ ಬಗ್ಗೆ ಮಾತನಾಡಿದ್ದಾರೆ. 

ಇನ್ಸ್ಸ್ಟಾಗ್ರಾಂನಲ್ಲಿ ಕಿಚ್ಚನ ಫ್ಯಾನ್ ಒಬ್ರು ಕೇಳಿದ ಪ್ರಶ್ನೆಗೆ ಉತ್ತರಿಸಿರೋ ಸಾನ್ವಿ, ಸೆಲೆಬ್ರೆಟಿಗಳು ಅನ್ನೋ ಕಾರಣಕ್ಕೆ ತುಂಬಾ ಧ್ವೇಷ ಮಾಡುಲಾಗುತ್ತಿದೆ. ಇದು ಸೆಲೆಬ್ರೆಟಿಗಳ ಮಕ್ಕಳ ತಪ್ಪಲ್ಲ. ದಯವಿಷ್ಟು ದ್ವೇಷಿಸೋದನ್ನ ನಿಲ್ಲಿಸಿ ಎಂದು ಉತ್ತರಿಸಿದ್ದಾರೆ. ಸಾನ್ವಿಯ ಈ ಟ್ವೀಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸೆಲೆಬ್ರೆಟಿ ಮಕ್ಕಳನ್ನ ಅಭಿಮಾನಿಸುವವರು ಇದ್ದಾರೆ. ದ್ವೇಸಿಸೋರು ಇದ್ದಾರೆ. ಇವರಿಗೇನು ದುಡ್ಡಿರೋರು. ಸ್ಟಾರ್ ಮಕ್ಕಳು ಇವರಿಗೆ ಕಾಲ ಬುಡದಲ್ಲೇ ಎಲ್ಲಾ ಸಿಗುತ್ತೆ. ನೋಡಿ ಕೊಳ್ಳೋಕೆ ಆಳು ಕಾಳುಗಳಿದ್ದಾರೆ ಅಂತೆಲ್ಲಾ ಮಾತಾಡ್ತಾರೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ನೆಪೋಟಿಸಂ ಟೀಕೆಗಳು ಶುರುವಾಗಿತ್ತು. ಸ್ಟಾರ್ ಮಕ್ಕಳ ಬಗ್ಗೆ ಕೆಟ್ಟ ಕಮೆಂಟ್ ಮಾಡೋದು, ದ್ವೇಷಿಸೋ ಸಂಸ್ಕೃತಿ ಹೆಚ್ಚಾಗಿತ್ತು. ಇದೀಗ ಕಿಚ್ಚನ ಹಾಗೆ ನೇರ ನಡೆ ನುಡಿಯ ವ್ಯಕ್ತಿತ್ವದ ಸಾನ್ವಿ ನೆಪೋಟಿಸಂ ಅಂತಹ ಕಾಂಪ್ಲಿಕೇಟೆಡ್ ಮ್ಯಾಟರ್ ಬಗ್ಗೆ ನಿರ್ಭಯವಾಗಿ ಉತ್ತರ ಕೊಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment