Asianet Suvarna News Asianet Suvarna News

ಮಲೆನಾಡಿನ 133 ವರ್ಷ ಹಳೆಯ ಶಾಲೆ ದತ್ತು ಸ್ವೀಕರಿಸಿದ ಕಿಚ್ಚ

Aug 1, 2021, 3:45 PM IST

ಲಾಕ್‌ಡೌನ್ ಮುಗಿಯಿತು ಎಂದಾಗ ಸಿನಿಮಾ ಕೆಲಸಗಳು ಚುರುಕಾಗಿದೆ. ಸಿನಿಮಾ ವಿಚಾರಗಳಿಂದ ಕಿಚ್ಚ ಆಕ್ಟಿವ್ ಆಗಿದ್ದರೆ ಅತ್ತ ಸಮಾಜಮುಖಿ ಕೆಲಸಗಳಲ್ಲಿಯೂ ಬ್ಯುಸಿಯಾಗಿದ್ದಾರೆ ನಟ. ಸರ್ಕಾರಿ ಶಾಲೆಗಳನ್ನು ಉಳಿಸೋ ಕಾಳಜಿಯನ್ನು ತೋರಿಸಿದ್ದಾರೆ ನಟ. 10ಕ್ಕೂ ಹೆಚ್ಚು ಶಾಲೆಗಳನ್ನು ನಟ ದತ್ತು ಸ್ವೀಕರಿಸಿದ್ದಾರೆ.

ಗಡಂಗ್ ರಕ್ಕಮ್ಮನ ಸಖತ್ ಲುಕ್‌ಗೆ ಸಿನಿಪ್ರಿಯರ್ ಕ್ಲೀನ್ ಬೋಲ್ಡ್

ಹುಟ್ಟೂರಲ್ಲಿ ನಟ ಮತ್ತೊಂದು ಶಾಲೆಯನ್ನು ದತ್ತು ಸ್ವೀಕರಿಸಿ ಮಾದರಿಯಾಗಿದ್ದಾರೆ. ನಮ್ಮ ನಾಡಿನಲ್ಲಿ ಕಳೆದು ಹೋಗುತ್ತಿರುವ ಸರ್ಕಾರಿ ಶಾಲೆಗಳನ್ನು ಬುಡ ಸಮೇತ ಮೇಲೆತ್ತಿ ಮತ್ತೆ ಅಲ್ಲಿ ಮಕ್ಕಳ ಕಲರವ ಹೆಚ್ಚುವಂತೆ ಮಾಡಿದ್ದಾರೆ. 133 ವರ್ಷ ಹಳೆಯ ಶಾಲೆ ದತ್ತು ಪಡೆದಿದ್ದಾರೆ ಸುದೀಪ್. ಶಿವಮೊಗ್ಗದಲ್ಲಿರುವ ಶಾಲೆಗಳಲ್ಲಿ ಇದೂ ಕೂಡಾ ಒಂದು. ಈ ಶಾಲೆಯ ಕೊಠಡಿ ಶಿಥಿಲವಾಗಿದ್ದು ಕಿಚ್ಚ ಶಾಲೆಯನ್ನು ದತ್ತು ಪಡೆದಿದ್ದಾರೆ ನಟ.