Asianet Suvarna News Asianet Suvarna News

ಜಪಾನ್‌ನಲ್ಲಿ ಯಶ್-ರಾಮ್ ಚರಣ್ ಯಾರು ನಂ-1 ?: ರಂಗಸ್ಥಳಂ ಸಿನಿಮಾ ಗಳಿಸಿದ್ದೆಷ್ಟು.?

ಜಪಾನ್‌ನಲ್ಲಿ ಕೆಜಿಎಫ್  v/s ರಂಗಸ್ಥಳಂ ಸಿನಿಮಾ
ಇವರಿಬ್ಬರಲ್ಲಿ ಜಪಾನ್ ಜನ ಕೈಹಿಡಿದಿದ್ದು ಯಾರನ್ನು?
ಜಪಾನ್ನಲ್ಲಿ ಅತಿಹೆಚ್ಚು ಕಲೆಕ್ಷನ್.. ಯಾವ ಸಿನಿಮಾ?

ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಜಪಾನ್ ದೇಶದಲ್ಲಿ ಶತದಿನೋತ್ಸವ ಆಚರಿಸಿ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಅದರ ಬೆನ್ನಲ್ಲೇ 5 ವರ್ಷಗಳ ಹಿಂದೆ ತೆಲುಗಿನಲ್ಲಿ ಸಕ್ಸಸ್ ಕಂಡಿದ್ದ 'ರಂಗಸ್ಥಳಂ'(Rangasthalam) ಚಿತ್ರ ಜಪಾನ್‌ನಲ್ಲಿ ರಿಲೀಸ್ ಆಗಿದೆ. ಸುಕುಮಾರ್ ನಿರ್ದೇಶನದ 'ರಂಗಸ್ಥಳಂ' ಚಿತ್ರಕ್ಕೆ ಜಪಾನ್(Japan) ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಫಸ್ಟ್ ವೀಕೆಂಡ್‌ನಲ್ಲಿ ಈ ಚಿತ್ರದ 7110 ಟಿಕೆಟ್‌ಗಳು ಮಾರಾಟವಾಗಿವೆ. ಇದರಿಂದ ರಂಗಸ್ಥಳಂ ಸಿನಿಮಾ 65.67 ಲಕ್ಷ ರೂ. ಗಳಿಕೆ ಮಾಡಿದೆಯಂತೆ. ಇನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ 'KGF' ಸರಣಿ ಸಿನಿಮಾಗಳು ಬಾಕ್ಸಾಫೀಸ್ ಶೇಕ್ ಮಾಡಿದ್ವು. ಕೆಜಿಎಫ್ ಈಗ ಜಪಾನ್ನಲ್ಲೂ ಅಭೂತ ಪೂರ್ವ ಒಪನಿಂಗ್ ಪಡೆದಿದೆ. ಫಸ್ಟ್ ವೀಕೆಂಡ್‌ನಲ್ಲಿ 'KGF' ಮೊದಲ ಭಾಗದ 4120 ಟಿಕೆಟ್ ಮಾರಾಟವಾಗಿದ್ದು, ಇದರಿಂದ 34 ಲಕ್ಷಕ್ಕೂ ಅಧಿಕ ಕಲೆಕ್ಷನ್ ಆಗಿದೆ. ಅದೇ ರೀತಿ 2ನೇ ಭಾಗಕ್ಕೆ 3718 ಟಿಕೆಟ್ ಮಾರಾಟವಾಗಿದೆ. ಆ ಮೂಲಕ ಅಂದಾಜು 30 ಲಕ್ಷ ರೂ. ಗಳಿಕೆ ಕಂಡಿದೆ. ಕೆಜಿಎಫ್ ಎರಡೂ ಸಿನಿಮಾಗಳಿಂದ ಒಟ್ಟು 70 ಲಕ್ಷ ಕಲೆಕ್ಷನ್ ಆಗಿದೆ ಅಂತ ಅಂದಾಜಿಸಲಾಗಿದೆ. ಈ ಮೂಲಕ ಸದ್ಯ ಜಪಾನ್ನಲ್ಲಿ ರಾಮ್ ಚರಣ್(Ramcharan) ಜೋರಾಗಿ ಮುನ್ನುಗ್ಗುತ್ತಿದ್ದು, ರಾಕಿಂಗ್ ಸ್ಟಾರ್ ಯಶ್(Yash) ಅವರ ಹಿಂದೆಯೇ ಹೆಜ್ಜೆ ಹಾಕುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಜನತೆಗೆ ಹೊಸದಾಗಿ ಬೆಲೆ ಏರಿಕೆ ಗ್ಯಾರಂಟಿ, ಬೆಲೆ ಭಾಗ್ಯವನ್ನು ಸರ್ಕಾರ ಕರುಣಿಸಿದೆ: ಹೆಚ್‌ಡಿಕೆ