ದೊಡ್ಡ ಸ್ಟಾರ್ ಒಬ್ಬರು ಕಾಲ್ ಮಾಡಿ ಯಾಕೆ ಹೇಳಿಲ್ಲ ಅಂದ್ರು; ಹರೀಶ್ ರೈ ಭಾವುಕ

ದೊಡ್ಡ ಸ್ಟಾರ್ ಒಬ್ಬರು ಕಾಲ್ ಮಾಡಿ ಯಾಕೆ ಹೇಳಿಲ್ಲ ಅಂತ ಕೇಳಿದ್ರು. ಬಳಿಕ ಅಕೌಂಟ್ ನಂಬರ್ ಕೊಡಿ ಅಂತ ಕೇಳಿದ್ರು ನನ್ನ ಹೆಸರು ಎಲ್ಲಿಯೂ ಹೇಳಬಾರದು ಅಂತ ಮನವಿ ಮಾಡಿದ್ರು ಎಂದು ಹರೀಶ್ ರೈ ಹೇಳಿದ್ದಾರೆ. 

 

First Published Aug 26, 2022, 5:34 PM IST | Last Updated Aug 26, 2022, 5:34 PM IST

ಸ್ಯಾಂಡಲ್ ವುಡ್‌ನ ಖ್ಯಾತ ನಟ, ಕೆಜಿಎಫ್-2 ಸಿನಿಮಾದ ಚಾಚಾ ಹರೀಶ್​ ರೈ ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇತ್ತೀಚಿಗೆ ವೈದ್ಯರ ಬಳಿ ಪರೀಕ್ಷೆ ಮಾಡಿಸಿದ್ದ ಹರೀಶ್ ರೈ ಅವರಿಗೆ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಸುಮಾರು ಮೂರು ವರ್ಷದಿಂದ ಅವರು ಅನಾರೋಗ್ಯದಿಂದ ನರಳಾಡುತ್ತಿದ್ದರು. ಇದೀಗ ಸಹಾಯ ಕೋರಿ ಮನವಿ ಮಾಡಿದ್ದಾರೆ. ಈ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಹರೀಶ್ ರೈ ಹಣ ಇಲ್ಲದ ಕಾರಣ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದು ಎಂದಿದ್ದಾರೆ. ಆರ್ಥಿಕವಾಗಿ ತುಂಬಾ ಕಷ್ಟವಾಯ್ತು. ಯಾರ ಬಳಿಯೂ ಕೇಳಬಾರದು ಅಂತ ಅಂದುಕೊಂಡಿದ್ದೆ. ಕೆಜಿಎಫ್ 2ನಲ್ಲಿ ಮಾಡಿದ್ದ ಬಳಿಕ ಧೈರ್ಯವಾಗಿ ಮಾತನಾಡಬಹುದು. ಹೀಗಿರುವಾಗ ಹಣ ಕೇಳಬಾರದು ಅಂತ ಅಂದ್ಕೊಂಡಿದ್ದೆ. ದೊಡ್ಡ ಸ್ಟಾರ್ ಒಬ್ಬರು ಕಾಲ್ ಮಾಡಿ ಯಾಕರೆ ಹೇಳಿಲ್ಲ ಅಂತ ಕೇಳಿದ್ರು. ಬಳಿಕ ಅಕೌಂಟ್ ನಂಬರ್ ಕೊಡಿ ಅಂತ ಕೇಳಿದ್ರು. ನನ್ನ ಹೆಸರು ಎಲ್ಲಿಯೂ ಹೇಳಬಾರದು ಅಂತ ಮನವಿ ಮಾಡಿದ್ರು. ಪ್ರಶಾಂತ್ ನೀಲ್ ಕಾಲ್ ಮಾಡಿದ್ರು ಅಂತ ಬಹಿರಂಗ ಪಡಿಸಿದರು.