Asianet Suvarna News Asianet Suvarna News
breaking news image

ಬೆಳ್ಳಿತೆರೆ ಅಗ್ನಿ ಪರೀಕ್ಷೆಯಲ್ಲಿ ಗೆದ್ದ ಕೃಷ್ಣ-ಶಶಾಂಕ್ ಜೋಡಿ: ಥಿಯೇಟರ್‌ನಲ್ಲಿ 'ಕೌಸಲ್ಯಾ ಸುಪ್ರಜಾ ರಾಮ' ಪ್ರೇಕ್ಷಕರ ಜಾತ್ರೆ!

ಕನ್ನಡ ಬಾಕ್ಸಾಫೀಸ್‌ಗೆ ಸಂಜೀವಿ 'ಕೌಸಲ್ಯಾ ಸುಪ್ರಜಾ ರಾಮ'
ಬೆಳ್ಳಿತೆರೆ ಅಗ್ನಿ ಪರೀಕ್ಷೆಯಲ್ಲಿ ಗೆದ್ದ ಕೃಷ್ಣ-ಶಶಾಂಕ್ ಜೋಡಿ.!
ಥಿಯೇಟರ್‌ನಲ್ಲಿ 'ಕೌಸಲ್ಯಾ ಸುಪ್ರಜಾ ರಾಮ' ಸಕ್ಸಸ್..!

ಸಕ್ಸಸ್ ಫುಲ್ ಸಿನಿಮಾಗಳಿಲ್ಲದೆ ಬಳಲಿ ಬೆಂಡಾಗಿದ್ದ ಸ್ಯಾಂಡಲ್‌ವುಡ್‌ಗೆ ಸಂಜೀವಿನಿ ಸಿಕ್ಕಿದೆ. ಅದೇ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ(Kausalya Supraja Rama). ಡಾರ್ಲಿಂಗ್ ಕೃಷ್ಣ(darling Krishna) ನಿರ್ದೇಶಕ ಶಶಾಂಕ್ ಜೋಡಿಯ ಈ ಮೂವಿ ಇದೀಗ ಪ್ರೇಕ್ಷಕರನ್ನ ಮತ್ತೆ ಚಿತ್ರಮಂದಿರಕ್ಕೆ ಕರೆತರುವಲ್ಲಿ ಗೆದ್ದಿದೆ. ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ಮೂರನೇ ದಿನವೂ ಭರ್ಜರಿ ಪ್ರದರ್ಶನ ಆಗ್ತಾ ಇದ್ದು, ಸಿನಿಮಾ ನೋಡಿದ ಕೆಲ ಪ್ರೇಕ್ಷಕರು ಎಮೋಷನಲ್ ಆಗಿ ಕಣ್ಣೀರು ಹಾಕಿದ್ದಾರೆ. ಅಷ್ಟೆ ಅಲ್ಲ ರಾಜ್ಯದ್ಯಾಂತ ಈ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಗ್ತಾ ಇದೆ. ಹೌಸ್ ಫುಲ್ ಪ್ರದರ್ಶನ ಕಾಣುತ್ತಿರೋ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾದ ಮೂರು ದಿನದ ಒಟ್ಟು ಥಿಯೇಟರ್ ಕಲೆಕ್ಷನ್(Collection) 6 ಕೋಟಿ 70 ಲಕ್ಷ ಅಂತ ಅಂದಾಜಿಸಲಾಗಿದೆ. ಈ ಮೂಲಕ ನಿರ್ದೇಶಕ ಶಶಾಂಕ್ ಕಥೆ ಡಾರ್ಲಿಂಗ್ ಕೃಷ್ಣ ಸ್ಟಾರ್ ಡಮ್ ಗೆಲುವಿನ ದಡಾ ಸೇರಿದೆ.

ಇದನ್ನೂ ವೀಕ್ಷಿಸಿ:  ಮೈಸೂರಿನಲ್ಲಿ ಸಿದ್ಧವಾಗ್ತಿದೆ ಸಿಎಂ ಸಿದ್ದರಾಮಯ್ಯ ಮನೆ: ಹೇಗಿದೆ ಗೊತ್ತಾ ಮೂರು ಅಂತಸ್ತಿನ ಐಷಾರಾಮಿ ಬಂಗಲೆ ?

Video Top Stories