Asianet Suvarna News Asianet Suvarna News

ಶಿವನ ಲೀಲಾ ಸೌಂದರ್ಯದ ಗುಟ್ಟು ರಟ್ಟು: ಸಪ್ತಮಿ ಗೌಡ ವರ್ಕೌಟ್ ವೀಡಿಯೋ ವೈರಲ್!

ಕಾಂತಾರ ನೋಡಿದವರ ಮನದಲ್ಲಿ ನಾಯಕಿ ಸಪ್ತಮಿ ಗೌಡ ಕೂಡ ಉಳಿದು ಬಿಡ್ತಾರೆ. ಸಹಜ ನಟನೆಯಿಂದ ಗಮನ ಸೆಳೀತಾರೆ. ಸಪ್ತಮಿ ಗೌಡ ಕಾಂತಾರ ಚಿತ್ರದ ಸಿಂಗಾರ ಸಿರಿ. ಇವರು 2020ರಲ್ಲಿ ತೆರೆಕಂಡ ಧನಂಜಯ್ ಅಭಿನಯದ ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. 

First Published Oct 20, 2022, 12:14 PM IST | Last Updated Oct 20, 2022, 12:14 PM IST

ಕಾಂತಾರ ನೋಡಿದವರ ಮನದಲ್ಲಿ ನಾಯಕಿ ಸಪ್ತಮಿ ಗೌಡ ಕೂಡ ಉಳಿದು ಬಿಡ್ತಾರೆ. ಸಹಜ ನಟನೆಯಿಂದ ಗಮನ ಸೆಳೀತಾರೆ. ಸಪ್ತಮಿ ಗೌಡ ಕಾಂತಾರ ಚಿತ್ರದ ಸಿಂಗಾರ ಸಿರಿ. ಇವರು 2020ರಲ್ಲಿ ತೆರೆಕಂಡ ಧನಂಜಯ್ ಅಭಿನಯದ ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಬೆಂಗಳೂರಿನವರಾದ ಸಪ್ತಮಿ ಗೌಡ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಸುಪುತ್ರಿ. ಸದ್ಯ ಕಾಂತಾರ ನಟಿಯ ವರ್ಕೌಟ್ ವೀಡಿಯೋ ಫುಲ್ ವೈರಲ್. ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಸಿನಿಮಾ ಎಲ್ಲೆಡೆ ಭಾರೀ ಹವಾ ಸೃಷ್ಟಿ ಮಾಡಿದ್ದು, ಈ ಚಿತ್ರದಲ್ಲಿ ನಟಿಸಿದ ಎಲ್ಲ ಕಲಾವಿದರೂ ಖ್ಯಾತಿ ಪಡೆದುಕೊಳ್ಳುತ್ತಿದ್ದಾರೆ. ರಿಷಬ್ ಶೆಟ್ಟಿಗೆ ಜೋಡಿಯಾಗಿ ಸಪ್ತಮಿ ಗೌಡ ಅವರಿಗೂ ಸಖತ್ ಡಿಮ್ಯಾಂಡ್ ಸೃಷ್ಟಿಯಾಗಿದೆ. ಆದರೆ, ನಟಿ ಮಾತ್ರ ತಡವಾದರೂ ಉತ್ತಮ ಚಿತ್ರಗಳ ಆಯ್ಕೆಗೆ ನಿರ್ಧರಿಸಿದ್ದಾರೆ. ಅದೇನೆ ಇದ್ರೂ ಕಾಂತಾರಾ ಪ್ರಚಾರದಲ್ಲಿ ಸಪ್ತಮಿ ಗೌಡ ಬಿಜಿಯಾಗಿದ್ದಾರೆ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories