50 ದಿನಗಳ ಹೊಸ್ತಿಲಲ್ಲಿ ಕನ್ನಡದ ಕಾಂತಾರ: 10 ವರ್ಷಗಳ ನಂತರ ಹೊಸ ದಾಖಲೆ

ಹಲವು ದಾಖಲೆಗಳನ್ನು ಅಳಿಸಿ ಹೊಸ ಇತಿಹಾಸ ಸೃಷ್ಟಿಸಿರುವ ಕಾಂತಾರ, ಈಗ 50 ದಿನದ ಭರ್ಜರಿ ಪ್ರದರ್ಶನದ ಹೊಸ್ತಿಲಲ್ಲಿದೆ. 
 

First Published Nov 18, 2022, 4:11 PM IST | Last Updated Nov 18, 2022, 4:11 PM IST

ಕಾಂತಾರ ಸ್ಯಾಂಡಲ್ ವುಡ್'ನಲ್ಲಿ ಈಗ ಅಪರೂಪದ ದಾಖಲೆ ಸೃಷ್ಟಿಸುತ್ತಿದೆ. ಇದೇ ನವೆಂಬರ್ 18ರಂದು ಕಾಂತಾರ ಕನ್ನಡದಲ್ಲಿ ಬಿಡುಗಡೆ ಆಗಿ 50 ದಿನ ಪೂರೈಸಲಿದೆ. ಈಗಿನ ಟ್ರೆಂಡ್'ನಲ್ಲಿ ಒಂದು ಸಿನಿಮಾ ಗೆಲುವು ಬಾಕ್ಸಾಫೀಸ್ ಕಲೆಕ್ಷನ್ ಮೇಲೆ ನಿಂತಿದೆ. ಆದ್ರೆ ಕಾಂತಾರ ಇದಕ್ಕೆ ತದ್ವಿರುದ್ಧ. ಬಾಕ್ಸಾಫೀಸ್ ಕಲೆಕ್ಷನ್ ಜೊತೆಗೆ ಕಾಂತಾರ ಕರ್ನಾಟಕದಲ್ಲಿ ರಿಲೀಸ್ ಆದ ಎಲ್ಲಾ ಥಿಯೇಟರ್‌ಗಳಲ್ಲಿ 50 ದಿನ ಭರ್ಜರಿ ಪ್ರದರ್ಶನ ಕಂಪ್ಲೀಟ್ ಮಾಡಲಿದೆ. ಕಳೆದ 10 ವರ್ಷದಲ್ಲಿ ಕನ್ನಡದ ಸಿನಿಮಾ ಬಿಡುಗಡೆ ಆದ ಎಲ್ಲಾ ಚಿತ್ರಮಂದಿರದಲ್ಲಿ 50 ದಿನ ಪೂರೈಸಿದ ಉದಹಾರಣೆಯೇ ಇಲ್ಲ. ಈ ಸಾಧನೆ 'ಕಾಂತಾರ' ಪಾಲಾಗಿದೆ.

'ಲೈಗರ್' ಬಂಡವಾಳದ ಮೇಲೆ ಅನುಮಾನ; ಇಡಿ ವಿಚಾರಣೆ ಎದುರಿಸಿದ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್