Asianet Suvarna News Asianet Suvarna News

ದಿಲ್​ಖುಷ್​ ಸಿನಿಮಾ ಮೆಚ್ಚಿದ ಕನ್ನಡ ಸ್ಟಾರ್ಸ್: ಪ್ರೇಕ್ಷಕರ ಮನಸ್ಸು ಗೆದ್ದ ಲವ್ ಸ್ಟೋರಿ!

ಸ್ಯಾಂಡಲ್​ವುಡ್ ಸಿನಿ ಪ್ರೇಮಿಗಳು ಈಗ ದಿಲ್ ಖುಷ್​ ಆಗುತ್ತಿದ್ದಾರೆ. ಅದಕ್ಕೆ ಕಾರಣ ತೆರೆ ಮೇಲೆ ಬಂದಿರೋ ದಿಲ್​​ ಖುಷ್​ ಸಿನಿಮಾ. ಈ ಹಿಂದೆ ನಿರ್ದೇಶಕ ಸಿಂಪಲ್ ಸುನಿ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದ ಪ್ರಮೋದ್ ಜಯ ನಿರ್ದೇಶನದ 'ದಿಲ್ ಖುಷ್' ಕಳೆದ ವಾರ ತೆರೆ ಕಂಡಿತ್ತು.

First Published Mar 27, 2024, 12:17 PM IST | Last Updated Mar 27, 2024, 12:17 PM IST

ಸ್ಯಾಂಡಲ್​ವುಡ್ ಸಿನಿ ಪ್ರೇಮಿಗಳು ಈಗ ದಿಲ್ ಖುಷ್​ ಆಗುತ್ತಿದ್ದಾರೆ. ಅದಕ್ಕೆ ಕಾರಣ ತೆರೆ ಮೇಲೆ ಬಂದಿರೋ ದಿಲ್​​ ಖುಷ್​ ಸಿನಿಮಾ. ಈ ಹಿಂದೆ ನಿರ್ದೇಶಕ ಸಿಂಪಲ್ ಸುನಿ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದ ಪ್ರಮೋದ್ ಜಯ ನಿರ್ದೇಶನದ 'ದಿಲ್ ಖುಷ್' ಕಳೆದ ವಾರ ತೆರೆ ಕಂಡಿತ್ತು. ಈ ಸಿನಿಮಾ ಈಗ ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಿದೆ. ಅಷ್ಟೆ ಅಲ್ಲ ಈ ಸಿನಿಮಾ ನೋಡಿ ಕನ್ನಡ ಸ್ಟಾರ್ಸ್​ ದಿಲ್​ ಖುಷ್​ ಎಂದಿದ್ದಾರೆ. ದಿಲ್​ ಖುಷ್ ಸಿನಿಮಾದಲ್ಲಿ ರಂಗಭೂಮಿ, ಧಾರಾವಾಹಿಗಳಲ್ಲಿ ನಟಿಸಿ ಅನುಭವ ಹೊಂದಿರುವ ರಂಜಿತ್  ಹೀರೋ ಆಗಿದ್ದಾರೆ. ಇದು ರಂಜಿತ್​ಗೆ ಮೊದಲ ಸಿನಿಮಾ. ಚಿತ್ರದಲ್ಲಿ ನಾಯಕಿಯಾಗಿ ಸ್ಪಂದನಾ ಸೋಮಣ್ಣ ಅಭಿನಯಿಸಿದ್ದಾರೆ. ಧರ್ಮಣ್ಣ ಕಡೂರು, ರಘು ರಾಮನಕೊಪ್ಪ, ಅರುಣಾ ಬಾಲರಾಜ್, ರಂಗಾಯಣ ರಘುರಂತಹ ದೊಡ್ಡ ತಾರಾಗಣ ಸಿನಿಮಾದಲ್ಲಿದ್ದಾರೆ.  ಜಯಪ್ರಭಾ ಕಲರ್ ಫ್ರೇಮ್ಸ್ ಬ್ಯಾನರ್ ಅಡಿಯಲ್ಲಿ ಜಯಲಕ್ಷ್ಮಿ ಪ್ರವೀಣ್ ಮತ್ತು ಪ್ರಭಾಸ್ ಶೇಖರ್ ದಿಲ್ ಖುಷ್ ಸಿನಿಮಾ ನಿರ್ಮಿಸಿದ್ದು, ಸಿನಿಮಾ ಈಗ ಜನ ಮೆಚ್ಚುಗೆ ಪಡೆಯುತ್ತಿದೆ.