Asianet Suvarna News Asianet Suvarna News

Premam Poojyam: ಪ್ರೇಮ್ ಅಭಿನಯಕ್ಕೆ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳ ಮೆಚ್ಚುಗೆ

ಪ್ರೇಮ್​ ಹೀರೋ ಎಂದುಕೊಂಡು ಈ ಸಿನಿಮಾ ನೋಡಲು ಬಂದೆ. ಆದರೆ ಪೂರ್ತಿ ಸಿನಿಮಾ ನೋಡಿದ ಬಳಿಕ ಗೊತ್ತಾಯಿತು ಇದು ಮಲ್ಟಿಸ್ಟಾರರ್​ ಚಿತ್ರ ಎಂದು ಸೆಲೆಬ್ರಿಟಿಗಳು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟ ನೆನಪಿರಲಿ ಪ್ರೇಮ್​ (Nenapirali Prem) ಅಭಿನಯದ 'ಪ್ರೇಮಂ ಪೂಜ್ಯಂ' (Premam Poojyam) ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಬೃಂದಾ ಆಚಾರ್ಯ (Brinda Acharya), ಐಂದ್ರಿತಾ ರೇ (Aindrita Ray) ಸಾಧುಕೋಕಿಲ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಈ ಚಿತ್ರವನ್ನು ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ವೀಕ್ಷಿಸಿ ಪ್ರೇಮ್​ ಮತ್ತು ಚಿತ್ರತಂಡದ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ನಟ ಶರಣ್​, ದಿಯಾ ಖ್ಯಾತಿಯ ಖುಷಿ ರವಿ, ತರುಣ್​ ಸುಧೀರ್, ಕಾರುಣ್ಯ ರಾಮ್, ನಿರ್ದೇಶಕ ಮಹೇಶ್, ಚಂದನ್ ಆಚಾರ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಚಿತ್ರವನ್ನು ವೀಕ್ಷಿಸಿದ್ದಾರೆ.

ಏಳು ಶೇಡ್‌ಗಳಲ್ಲಿ ಪ್ರೇಮದ ರೋಮಾಂಚನ: ಪ್ರೇಮ್‌

ಪ್ರೇಮಂ ಎಂಬ ಹೆಸರಿನ ರೀತಿಯೇ ಈ ಚಿತ್ರತಂಡಕ್ಕೆ ಸಿನಿಮಾ ಮೇಲೆ ಇರುವ ಪ್ರೇಮವು ಪ್ರತಿ ಫ್ರೇಮ್​ನಲ್ಲಿ ಕಾಣಿಸುತ್ತದೆ. ನಿರ್ದೇಶಕರ ಕನಸು ತುಂಬ ಕಲರ್​ಫುಲ್​ ಆಗಿ ಮೂಡಿಬಂದಿದೆ. ದಿನದಿನಕ್ಕೂ ಪ್ರೇಮ್​ ಅವರು ಯಂಗ್​ ಆಗಿ ಕಾಣಿಸುತ್ತಾರೆ. ಈ ಸಿನಿಮಾ ಒಂದು ದೃಶ್ಯ ವೈಭವದಂತಿದೆ. ನಿಜವಾದ ಪ್ರೀತಿ ಬಗ್ಗೆ ಒಂದೊಳ್ಳೆಯ ಮೆಸೇಜ್​ ಈ ಸಿನಿಮಾದಲ್ಲಿದೆ. ಹಾಗೂ ಪ್ರೇಮ್​ ಹೀರೋ ಎಂದುಕೊಂಡು ಈ ಸಿನಿಮಾ ನೋಡಲು ಬಂದೆ. ಆದರೆ ಪೂರ್ತಿ ಸಿನಿಮಾ ನೋಡಿದ ಬಳಿಕ ಗೊತ್ತಾಯಿತು ಇದು ಮಲ್ಟಿಸ್ಟಾರರ್​ ಚಿತ್ರ ಎಂದು ಸೆಲೆಬ್ರಿಟಿಗಳು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories