Puneeth Rajkumar Death ನಾನು ಶಾಕ್‌ನಲ್ಲಿದ್ದೇನೆ: ನಟಿ ರಮ್ಯಾ
ನನಗೇನು ಹೇಳಬೇಕು ಅಂತಾ ಗೊತ್ತಾಗುತ್ತಿಲ್ಲ. ನಾನು ಶಾಕ್‌ನಲ್ಲಿದ್ದೇನೆ. ಅವರ ನಿಧನ ದುಃಖ ತಂದಿದೆ ಜೊತೆಗೆ ಭಾವನೆಗಳು ಕೆಲವು ವೈಯಕ್ತಿಕ. ಅವುಗಳನ್ನು ಪದಗಳಲ್ಲಿ ಹೇಳಲಾಗದು. RIP ಎಂದು ಹೇಳಿ ಮುಗಿಸಲಾಗದು ಎಂದು ರಮ್ಯಾ ಹೇಳಿದ್ದಾರೆ.
ಬೆಂಗಳೂರು(ಅ.29): ಸ್ಯಾಂಡಲ್‌ವುಡ್ ನಟಿ ರಮ್ಯಾ (Ramya) ಅವರು ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ನಿಧನದ ಕುರಿತಂತೆ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದು, ನನಗೇನು ಹೇಳಬೇಕು ಅಂತಾ ಗೊತ್ತಾಗುತ್ತಿಲ್ಲ. ನಾನು ಶಾಕ್‌ನಲ್ಲಿದ್ದೇನೆ. ಅವರ ನಿಧನ ದುಃಖ ತಂದಿದೆ ಎಂದು ಹೇಳಿದ್ದಾರೆ. ಜೊತೆಗೆ ಭಾವನೆಗಳು ಕೆಲವು ವೈಯಕ್ತಿಕ. ಅವುಗಳನ್ನು ಪದಗಳಲ್ಲಿ ಹೇಳಲಾಗದು. RIP ಎಂದು ಹೇಳಿ ಮುಗಿಸಲಾಗದು. ದೇಹ ಮನಸ್ಸಿಗೂ ಮೀರಿದ್ದು ಭಾವನೆ. ಕೆಲವು ಬಾಂಧವ್ಯ ವರ್ಣನೆಗೂ ಮೀರಿದ್ದು. ಬೇರೇನನ್ನು ಹೇಳಲಾಗದ ಸಂದರ್ಭ ಇದು. ಈ ವಿಚಾರದ ಬಗ್ಗೆ ಸದ್ಯದ ಸಂದರ್ಭದಲ್ಲಿ ಹೆಚ್ಚೇನೂ ಕೇಳದಿರಲು ಮಾಧ್ಯಮದ ಮಿತ್ರರಲ್ಲಿ ವಿನಂತಿ.
ಮಂತ್ರಾಲಯ ಮಠಕ್ಕೂ ಅಪ್ಪುಗೂ ಅವಿನಾಭಾವ ಸಂಬಂಧ
ಸಿನಿಮಾ ರಂಗದಲ್ಲಿ ಆತ ನನಗೆ ಅತ್ಯಂತ ಆಪ್ತ ಸ್ನೇಹಿತ. ಅವರಿಗೂ ಹಾಗೂ ಅವರ ಪರಿವಾರದವರಿಗೂ ಎಂದೆಂದಿಗೂ ನನ್ನ ಅತ್ಯಂತ ಪ್ರೀತಿಪೂರ್ವಕ ಹಾಗೂ ಹೃದಯದಾಳದ ಗೌರವ ನಮನಗಳು. ಕೇವಲ ಇನ್‌ಸ್ಟಾಗ್ರಾಮ್ ಪೋಸ್ಟ್ ಅಥವಾ ಟ್ವೀಟ್ ಮೂಲಕ ಭಾವನೆಗಳನ್ನು ಹೇಳಲಾಗದು. ಅವರ ಕುಟುಂಬವನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತೇನೆ. ಅಪ್ಪು ನೀವು ಎಂದೆಂದಿಗೂ ಮಾಸದ ನೆನಪು. ಸದಾ ನನ್ನ ನೆನಪಿನಲ್ಲಿ ಎಂದೆಂದೂ ಇರುವಿರಿ ಅಪ್ಪು ಎಂದು ರಮ್ಯಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment