Asianet Suvarna News Asianet Suvarna News

ಸಮಾಧಿ ಸ್ಥಳದಲ್ಲಿ ತಾಯಿ ಪ್ರತಿಮೆ ಮಾಡಿಸಿದ ದುನಿಯಾ ವಿಜಯ್!

Jul 17, 2021, 3:32 PM IST

ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್ ಅನೇಕಲ್‌ನ ತಮ್ಮ ಜಮೀನಿನಲ್ಲಿ ಇತ್ತೀಚಿಗೆ ಅಗಲಿದ ತಮ್ಮ ತಾಯಿ ನಾರಾಯಣ್ಣಮ್ಮ ಅವರ ಸಮಾಧಿ ನಿರ್ಮಿಸಿ, ಪ್ರತಿಮೆ ನಿರ್ಮಿಸಿದ್ದಾರೆ. ದುನಿಯಾ ವಿಜಯ್ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ದುನಿಯಾ ಚಿತ್ರದಲ್ಲಿ ಹೇಳಿದ ಡೈಲಾಗ್ 'ಜೀವನ ಮಾಡಬೇಕು, ಅಮ್ಮನ ಗೋರಿ ಕಟ್ಟಕ್ಕೆ ಕಾಸು ಕೂಡಿಸಬೇಕು. ಏನಾದರೂ ಒಂದು ಕೆಲಸ ಕೊಡಿಸಿ ಅಣ್ಣ,' ಡೈಲಾಗ್ ಕೂಡ ವೈರಲ್ ಆಗುತ್ತಿದೆ. ವಿಜಯ್ ತಾಯಿ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment