Asianet Suvarna News Asianet Suvarna News

ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಆಗಿದ್ದಾರೆ ಎಸ್‌ ನಾರಾಯಣ್

ಪುಟ್ಟ ಪರದೆ ಅಲ್ಲಿ ಕಲಾ ಸಾಮ್ರಾಟ್ | ರಣಕಲ್ ವೀರಯ್ಯ ದೇವ ಪಾತ್ರದಲ್ಲಿ ಅಬ್ಬರ | ನಿವೃತ್ತ ಮಿಲಟರಿ ಅಧಿಕಾರಿ ಪಾತ್ರದಲ್ಲಿ ನಾರಾಯಣ್ | ಜೀಟಿವಿ ಪಾರು ಸೀರಿಯಲ್ ಅಲ್ಲಿ ಕಲಾ ಸಾಮ್ರಾಟ್ 

First Published Dec 16, 2019, 11:13 AM IST | Last Updated Dec 16, 2019, 11:13 AM IST

ಕಲಾ ಸಾಮ್ರಾಟ್ ಎಸ್.ನಾರಾಯಣ ಅವರಿಗೆ  ಕಿರುತೆರೆ ಹೊಸದೇನೂ ಅಲ್ಲ.  ಸುಮತಿ,ಅಂಬಿಕಾ, ಚಂದ್ರಿಕಾ, ಪಾರ್ವತಿ, ಭಾಗೀರಥಿಯಂತಹ ಸೀರಿಯಲ್ ಡೈರೆಕ್ಟ್ ಮಾಡಿದ್ದರು ಎಸ್.ನಾರಾಯಣ್.  ಆದರೆ, ಬಹು ದಿನಗಳ ಬಳಿಕ ಈಗ ಮತ್ತೆ ಕಿರುತೆರೆಗೆ ವಾಪಾಸ್ ಆಗಿದ್ದಾರೆ. ಕನ್ನಡದ ಜೀ ಟಿವಿಯ ಪಾರು ಸೀರಿಯಲ್‌ನಲ್ಲಿ.  ರಣಕಲ್ ವೀರಯ್ಯ ದೇವ ಹೆಸರಿನ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ.  ನಿವೃತ್ತ ಖಡಕ್ ಮಿಲಿಟರಿ ಆಫೀಸರ್ ಆಗಿ ಅಬ್ಬರಿಸಲಿದ್ದಾರೆ.