ಜಾಕಿ ರಿಲೀಸ್ ಆಗಿ ಕಳೆಯಿತು 13 ವರ್ಷ: ಅಪ್ಪು ಜಾಕಿ ಸಿನಿಮಾ ಬಗ್ಗೆ ಬರೆದಿದ್ದೇನು ಗೊತ್ತಾ..?

ಈ ಹಾಡು ಕೇಳಿದಾಕ್ಷಣ ಪುನೀತ್ ರಾಜ್‌ಕುಮಾರ್ ಆ ಸ್ಟೈಲ್, ಆ ಬಿಂದಾಸ್ ಡ್ಯಾನ್ಸ್ ನೆನಪಾಗಿಬಿಡುತ್ತೆ. ಇವತ್ತಿಗೂ ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ, ಈ ಹಾಡು ಯುತ್‌ಗಳ ದಿ ಫೇವರೇಟ್. ಅಷ್ಟಕ್ಕೂ ಈ ಸಾಂಗ್ ಬಗ್ಗೆ ಹೇಳೋಕೆ ಕಾರಣ ಏನ್ ಗೊತ್ತಾ.? ಇದೇ ಜಾಕಿ ಹುಟ್ಟಿ ಇಂದಿಗೆ 13 ವರ್ಷ ಆಗಿದೆ. 

First Published Oct 16, 2023, 10:54 AM IST | Last Updated Oct 16, 2023, 10:54 AM IST

ನಿರ್ದೇಶಕ ಸೂರಿ ಮತ್ತು ಅಪ್ಪು ಕಾಂಬಿನೇಷನ್‌ನಲ್ಲಿ 2010ರಲ್ಲಿ ಬಂದ ಬ್ಲಾಕ್ ಬ್ಲಸ್ಟರ್ ಸಿನಿಮಾ ಜಾಕಿ. ಈ ಮೆಗಾ ಹಿಟ್ ಜಾಕಿ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದಿಷ್ಟು ವಿಷಯ ಕೇಳ್ತೀವಿ ಕೇಳಿ. ಆ ಕಾಲದಲ್ಲೇ ಜಾಕಿ ಸಿನಿಮಾ(Jackie movie) 30 ಕೋಟಿ ಗಲ್ಲಾಪೆಟ್ಟಿಗೆ ಲೂಟಿ ಹೊಡೆದಿತ್ತು. ‘ಜಾಕಿ’ ಸಿನಿಮಾ, ಪೂರ್ಣಿಮಾ ಎಂಟ್ರರ್‌ಪ್ರೈಸಸ್ ಬ್ಯಾನರ್‌ನಡಿಯಲ್ಲಿ ನಿರ್ಮಾಣವಾಗಿರೋ ಅಪ್ಪು ನಟನೆಯ 15ನೇ ಚಿತ್ರ. ನಿದೇರ್ಶನ ಸೂರಿ ಹಾಗೂ ಅಪ್ಪು ಕಾಂಬಿನೇಷ್ನ ಮೊದಲ ಸಿನಿಮಾ. ಇದೇ ಚಿತ್ರದಿಂದ ಮಲೆಯಾಳಂ ನಟಿ ಭಾವನ(Bhavana) ಸ್ಯಾಂಡಲ್ವುಡ್ಗೆ ಡೆಬ್ಯೂ ಆಗಿದ್ದು. ಆ ನೆನಪ್ಪನ್ನ ಭಾವನ ಹಂಚಿಕೊಂಡಿದ್ದಾರೆ. ಜಾಕಿ ಪಕ್ಕಾ ಆಕ್ಷನ್ ಧಮಾಕ. ಆ ಟೈಂನಲ್ಲಿ ಫ್ಯಾಮಿಲಿ ಎಂಟರ್‌ಟೈನ್ ಸಿನಿಮಾಗಳಲ್ಲೇ ಹೆಚ್ಚು ಮಿಂಚುತ್ತಿದ್ದ ಅಪ್ಪು ಜಾಕಿಯಲ್ಲಿ ಪಕ್ಕಾ ಲೋಕಲ್ ಪರೋಡಿಯಾಗಿ ಅನಾಥ ಹುಡುಗನ ರೋಲ್ ಮಾಡಿದ್ರು. ಆದ್ರೆ ಜಾಕಿಯಲ್ಲಿ ಮದರ್ ಸೆಂಟಿಮೆಂಟ್ ಇರಬೇಕು ಅಂತ ಹಠ ಹಿಡಿದಿದ್ರು ಅಪ್ಪು (Puneeth Rajkumar) ಅಣ್ಣ ರಾಘಣ್ಣ. ಭಟ್ ಇದಕ್ಕೆ ನಿರ್ದೇಶಕ ಸೂರಿ ಒಪ್ಪಲೇ ಇಲ್ಲ. ಇದ್ರಿಂದ ಸೂರಿ ರಘಣ್ಣ ಮಧ್ಯೆ ಒಂದಿಷ್ಟು ಭಿನ್ನಾಭಿಪ್ರಾಯ ಆಗಿ ಜಾಕಿ ಶುರುವಾಗೋದೇ ಡೌಟ್ ಅನ್ನೋ ಮಟ್ಟಕ್ಕೆ ಹೋಗಿತ್ತು. ಕೊನೆಗೆ ಒಂದು ಸಂದಾನಕ್ಕೆ ಬಂದು ಜಾಕಿ ಸಿನಿಮಾಗೆ ಅಸ್ತು ಅಂದ್ರು ರಾಘಣ್ಣ. ಅಪ್ಪು ಆ್ಯಕ್ಷನ್ ಮಾಡೋದ್ರಲ್ಲಿ ಪಂಟರ್. ಯಾವ್ದೇ ಡ್ಯೂಪ್ ಇಲ್ಲದೇ ಫೈಟ್ ಮಾಡೋ ಅಭ್ಯಾಸ ಅಪ್ಪುರದ್ದು. ಹೀಗಾಗಿ ಜಾಕಿ ಪಾತ್ರದಲ್ಲಿ ರಿಯಾಲಿಟಿ ಇರಲಿ ಅಂತ ಅಪ್ಪು ಆಸೆ ಪಟ್ಟಿದ್ರು. ಆ ಕಡೆ ನಿರ್ದೇಶಕ ಸುಕ್ಕಾ ಸೂರಿಗೂ ಇದೇ ಬೇಕಿತ್ತು. ಹೀಗಾಗಿ ಜಾಕಿಯಲ್ಲಿ ಬೆಂಕಿ ಫೈಟ್ ಒಂದನ್ನ ಇಟ್ಟಿದ್ರು. ಈ ಆಕ್ಷನ್ಅನ್ನ ರಿಯಲ್ ಅಗಿ ಮಾಡಿದ್ದ ಅಪ್ಪು ಮೈಗೆ ಬೆಂಕಿ ಹೊತ್ತಿಕೊಂಡಿತ್ತು. ಕೊನೆಗೆ ಯಾವ್ದೇ ಅನಾಹುತ ಆಗದೆ ಅಪ್ಪು ಈ ಬೆಂಕಿ ಅವಘಡದಿಂದ ಬಚಾವ್ ಆಗಿದ್ರು.

ಇದನ್ನೂ ವೀಕ್ಷಿಸಿ:  'ಒರಿಜಿನಲ್ ಗ್ಯಾಂಗ್ ಸ್ಟರ್' ಈಸ್ ಅರೈವಿಂಗ್: ಶಿವಣ್ಣನ 'ಘೋಸ್ಟ್' ರಿಲೀಸ್‌ಗೆ ಕೌಂಟ್‌ಡೌನ್..!