ಹೆಡ್‌ಬುಶ್ ವಿವಾದ ಸುಖಾಂತ್ಯ: ಕರಗ ಕುರಿತ ಡೈಲಾಗ್ ತೆಗೆಯಲು ಚಿತ್ರತಂಡ ಒಪ್ಪಿಗೆ
ಹೆಡ್ ಬುಷ್ ಸಿನಿಮಾಗೆ ಸಂಬಂಧ ಪಟ್ಟಂತೆ ಎರಡು ವಿವಾದಗಳು ಚಿತ್ರತಂಡಕ್ಕೆ ಮುಳ್ಳಾಗಿ ಪರಿಣಮಿಸಿದೆ. ಇದೀಗ ವಿವಾದ ಅಂತ್ಯ ಕಂಡಿದೆ.
ಹೆಡ್ ಬುಷ್ ಸಿನಿಮಾಗೆ ಸಂಬಂಧ ಪಟ್ಟಂತೆ ಎರಡು ವಿವಾದಗಳು ಚಿತ್ರತಂಡಕ್ಕೆ ಮುಳ್ಳಾಗಿ ಪರಿಣಮಿಸಿದೆ. ವೀರಗಾಸೆ ಕಲಾವಿದರಿಗೆ ಅವಮಾನ ಮಾಡಲಾಗಿದೆ ಎಂಬುದು ಒಂದು ವಿವಾದವಾದರೆ, ‘ಜುಜುಬಿ ಕರಗ’ ಎನ್ನುವ ಪದವನ್ನು ಬಳಸಲಾಗಿದ್ದು ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು. ವೀರಗಾಸೆಗೆ ಸಂಬಂಧಿಸಿದಂತೆ ಚಿತ್ರತಂಡ ಕ್ಷಮೆ ಕೇಳಿತ್ತು. ಈಗ ಜುಜುಬಿ ಕರಗ ಎನ್ನುವ ಪದವನ್ನು ಮ್ಯೂಟ್ ಮಾಡುವುದಾಗಿ ತಂಡ ಒಪ್ಪಿಕೊಂಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಧರ್ಮರಾಯ ಸ್ವಾಮಿ ದೇವಸ್ಥಾನದ ಹಿರಿಯರು, ಚಿತ್ರತಂಡದ ಸದಸ್ಯರು ಮತ್ತು ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್, ಕಾರ್ಯದರ್ಶಿ ಸುಂದರರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಸಭೆಯಲ್ಲಿ ವಿವಾದಕ್ಕೆ ತೆರೆ ಎಳೆಯಲಾಗಿದೆ.