ಗೆಟ್ ವೆಲ್ ಸೂನ್ ಶಿವಣ್ಣ: ಕರುನಾಡ ಚಕ್ರವರ್ತಿಗೆ ಶುಭ ಹಾರೈಕೆಗಳ ಸುರಿಮಳೆ
ನಟ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಹಾಗೂ ಸರ್ಜರಿಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಆರೋಗ್ಯ ಸಮಸ್ಯೆಗಳು ಎಲ್ಲರಿಗೂ ಇದ್ದೇ ಇರುತ್ತದೆ. ಅದರ ಬಗ್ಗೆ ಮಾತನಾಡುವಾಗ ನಾವು ಸಹ ಸಹಜವಾಗಿ ಸ್ವಲ್ಪ ಭಾವುಕರಾಗುತ್ತೇವೆ.
ನಟ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಹಾಗೂ ಸರ್ಜರಿಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಆರೋಗ್ಯ ಸಮಸ್ಯೆಗಳು ಎಲ್ಲರಿಗೂ ಇದ್ದೇ ಇರುತ್ತದೆ. ಅದರ ಬಗ್ಗೆ ಮಾತನಾಡುವಾಗ ನಾವು ಸಹ ಸಹಜವಾಗಿ ಸ್ವಲ್ಪ ಭಾವುಕರಾಗುತ್ತೇವೆ. ಹೊರಡುವ ಮುನ್ನ ಇಲ್ಲೇ ಪರೀಕ್ಷೆ ಮಾಡಿಸಿದಾಗ ಎಲ್ಲವೂ ಸರಿಯಾಗಿದೆ ಎಂದಿದ್ದಾರೆ. ಡಿಸೆಂಬರ್ 24ರಂದು ಶಸ್ತ್ರ ಚಿಕಿತ್ಸೆ ನಡೆಯಲಿದೆ, ಸುಮಾರು 35 ದಿನಗಳ ಕಾಲ ಮನೆ ಮತ್ತು ಭಾರತದಿಂದ ದೂರ ಇರಬೇಕಾದ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ. ನನಗೆ ಆತ್ಮವಿಶ್ವಾಸವಿದೆ. ಎಲ್ಲರ ಹಾರೈಕೆಯೂ ಇದೆ. ಅಭಿಮಾನಿಗಳು ಮತ್ತು ಮಾಧ್ಯಮಗಳು ಕಳವಳ ವ್ಯಕ್ತಪಡಿಸಿವೆ. ನನಗೆ ತುಂಬಾ ಪ್ರೀತಿ, ಗೌರವ ಕೊಟ್ಟಿದ್ದಾರೆ ಎಂದು ಶಿವಣ್ಣ ಈ ಹಿಂದೆ ತಿಳಿಸಿದ್ದರು. ಸದ್ಯ ನಟ ಶಿವಣ್ಣಗೆ ಇಡೀ ಸ್ಯಾಂಡಲ್‌ವುಡ್ ಹಾಗೂ ಕರುನಾಡ ಅಭಿಮಾನಿಗಳು ಶುಭಹಾರೈಸಿ ಧೈರ್ಯ ತುಂಬಿಸಿ ಹಾರೈಸಿದ್ದಾರೆ.