Asianet Suvarna News Asianet Suvarna News

ರಾಯರ ದರ್ಶನವಾಗಿದೆ, ವೇದ ಸಿನಿಮಾ ಚೆನ್ನಾಗಿ ಓಡುತ್ತೆ: ಗೀತಾ ಶಿವ ರಾಜ್‌ಕುಮಾರ್‌

ಗೀತಾ ಶಿವ ರಾಜ್‌'ಕುಮಾರ್‌ ಅವರ ಮೊದಲ ಬ್ಯಾನರ್‌'ನಲ್ಲಿ 'ವೇದ' ಸಿನಿಮಾ ಬರುತ್ತಿದೆ. ಈ ಕುರಿತಂತೆ ಮಂತ್ರಾಲಯಕ್ಕೆ ಆಗಮಿಸಿದ್ದ ಶಿವಣ್ಣ ದಂಪತಿ ಮಾತಾಡಿದ್ದಾರೆ.
 

ವೇದ ಸಿನಿಮಾದ ಕುರಿತು ಗೀತಾ ಶಿವ ರಾಜ್‌'ಕುಮಾರ್‌ ಮಾತನಾಡಿದ್ದು, ರಾಯರ ದರ್ಶನವಾಗಿದೆ. ರಾಯರ ಆಶೀರ್ವಾದ ನಮ್ಮೆಲ್ಲರ ಮೇಲೆ ಇದೆ‌. ಇನ್ನು ಸಿನಿಮಾ ಚೆನ್ನಾಗಿ ಹೋಗುತ್ತದೆ‌. ವೇದ ಚಿತ್ರದ ಹಾಡನ್ನು ಎಲ್ಲರು ಇಷ್ಟ ಪಟ್ಟಿದ್ದಾರೆ ಎಂದರು. ಡೈರೆಕ್ಟರ್‌ ಹರ್ಷ ಮತ್ತು ಅರ್ಜುನ್‌ ಜನ್ಯ ಅವರಿಗೆ ಈ ಕ್ರೆಡಿಟ್‌ ಸಲ್ಲುತ್ತದೆ. ಯಾಕೆಂದರೆ ಅವರು ಅಷ್ಟು ಚೆನ್ನಾಗಿ ಹಾಡನ್ನು ಮಾಡಿದ್ದಾರೆ. ಅಪ್ಪಾಜಿ ಅಮ್ಮಾವರು ಇರುವಾಗಲೇ ಇಲ್ಲಿಗೆ ಬಂದು ಹೋಗುತ್ತಿದ್ದೆವು. ಇಲ್ಲಿಗೆ ಬಂದರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಹಾಗೆ ರಾಯರ ಆಶೀರ್ವಾದವು ಸಿಗುತ್ತದೆ ಎಂದು ಹೇಳಿದ್ದಾರೆ.

'ಸರ್ಕಸ್‌'ಗಾಗಿ ಹಾಟ್ ಆದ ಕರಾವಳಿ ಸುಂದರಿ; ಕೆಂಪು ಸೀರೆಯಲ್ಲಿ ಪೂಜಾ ಹೆಗ್ಡೆಯ ಮಾದಕ ನೋಟ