ಭಾರವಾದ ಭಾವನೆಗಳಿಗೆ ಒಂದು ವರ್ಷ: ದಿಗ್ಗಜರಿಂದ ರಂಗೇರಲಿದೆ ಪುನೀತ ಪರ್ವ!

ಗಂಧದ ಗುಡಿಯ ಅಪ್ಪು ಸ್ವಾಗತಕ್ಕೆ ಕರುನಾಡು ಸಜ್ಜು. ಪುನೀತ ಪರ್ವಕ್ಕೆ ಅರಮನೆ ಮೈದಾನ ಅಬ್ಬರ.. ದೊಡ್ಮನೆಯ ಸಂಭ್ರಮಕ್ಕೆ ಸೂಪರ್ ಸ್ಟಾರ್ಸ್.. ಇದೇ ಈ ಹೊತ್ತಿನ ವಿಶೇಷ ಪುನೀತ ಪರ್ವಕ್ಕೆ ಕೌಂಟ್ ಡೌನ್..

First Published Oct 21, 2022, 10:42 AM IST | Last Updated Oct 21, 2022, 10:42 AM IST

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಮತ್ತೆ ತೆರೆ ಮೇಲೆ ಗಂಧದ ಗುಡಿ ಮೂಲಕ ಬರ್ತಾ ಇದಾರೆ. ಆ ಸಿನಿಮಾನದ ಪ್ರಿ ರಿಲೀಸ್ ಈವೆಂಟ್ ಸಲುವಾಗಿ ಅರಮನೆ ಮೈದಾನ ಸಜ್ಜಾಗ್ತಾ ಇದೆ. ಅದ್ಭುತ ಘಳಿಗೆಗೆ ಕರುನಾಡು ಸಾಕ್ಷಿಯಾಗಲಿದೆ. ಪುನೀತ್ ರಾಜಕುಮಾರ್ ಅವರ ಹೆಸರಲ್ಲಿ ನಡಿಯಲಿರೋ ಈ ಕಾರ್ಯಕ್ರಮದ ವಿಶೇಷತೆ ಏನು? ಯಾರೆಲ್ಲಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ? ಏನೇನು ಇರಲಿದೆ ಅನ್ನೋದ್ರ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ. ಪುನೀತ ಪರ್ವ ಅನ್ನೋ ಅದ್ಭುತ ಕಾರ್ಯಕ್ರಮಕ್ಕೆ ಅರಮನೆ ಮೈದಾನ ಸಾಕ್ಷಿಯಾಗಲಿದೆ. ಲಕ್ಷಾಂತರ ಅಪ್ಪು ಫ್ಯಾನ್ಸ್ ಬರೋ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಅಲ್ಲಿನ ವ್ಯವಸ್ಥೆ ಹೇಗೆ ಸಾಗಿದೆ ಗೊತ್ತಾ. ಪುನೀತ ಪರ್ವ ಕಾರ್ಯಕ್ರಮದ ತಯಾರಿ ಭರದಿಂದ ಸಾಗಿದೆ. ಸೌಂಡ್ ಲೈಟಿಂಗ್ ಎಲ್ಲಾವೂ ಭರ್ಜರಿಯಾಗಿರಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment