ಆಲ್ ಓಕೆಗೆ ಹಾಡಿನಲ್ಲೇ ಬಾಣ ಬಿಟ್ಟ Rapper ರಾಹುಲ್ ಡಿಟ್ಟೋ

ಕನ್ನಡದ ಖ್ಯಾತ ರ್ಯಾಪರ್‌ಗಳಾದ ರಾಹುಲ್ ಡಿಟ್ಟೋ ಮತ್ತು ಆಲ್ ಓಕೆ ಇಬ್ಬರೂ ಕಿತ್ತಾಡುತ್ತಿದ್ದಾರೆ. 

First Published Mar 3, 2023, 4:44 PM IST | Last Updated Mar 3, 2023, 4:43 PM IST

ಕನ್ನಡ ಚಿತ್ರರಂಗದ ಅಂದ್ರೆ ಒಂದೇ ಕುಟುಂಬ ಅಂತ ಚಿತ್ರರಂಗದವರೇ ಹೇಳ್ತಿರ್ತಾರೆ. ಆದ್ರೆ ಅವರಲ್ಲಿರೋ ವಿಷ ಬೀಜ ಆಗಾಗ ಮೊಳಕೆ ಒಡೆಯುತ್ತಿರುತ್ತೆ. ಈ ವಿಷ ಬೀಜ ಈಗ ಕನ್ನಡದ ಸಂಗೀತ ಲೋಕದಲ್ಲೂ ಹುಟ್ಟಿಕೊಂಡಿದೆ. ಇಷ್ಟು ದಿನ ನಾನು ನೀನು ಭಾಯಿ ಭಾಯಿ, ಡೋಂಟ್ ವರಿ ಅನ್ನುತ್ತಿದ್ದ ರ್ಯಾಪ್ ಸ್ಟಾರ್ ಆಲ್ ಓಕೆ ಅಲೋಕ್ ಹಾಗು ರಾಹುಲ್ ಡಿಟ್ಟೋ ಇದೀಗ ಕಿತ್ತಾಡಿಕೊಂಡಿದ್ದಾರೆ. ಅಷ್ಟೆ ಅಲ್ಲ ಹಾಡಿನ ಮೂಲಕವೇ ಏಟು ಎದುರೇಟು ಕೊಟ್ಟುಕೊಂಡಿದ್ದಾರೆ. ಈ ಹಿಂದೆ ರ್ಯಾಪರ್‌ಗಳ ಕಿತ್ತಾಟ ಹಿಂದಿ ಚಿತ್ರರಂಗದಲ್ಲಿ ನೋಡಿದ್ವಿ. ಈಗ ಆ ಸುನಾಮಿ ಕನ್ನಡದ ರ್ಯಾಪ್ ಲೋಕದಲ್ಲೂ ಎದ್ದಿದೆ. ಒಂದೇ ಟೀಂನಲ್ಲಿದ್ದು ಒಟ್ಟಿಗೆ ರ್ಯಾಪ್  ಸಾಂಗ್ ಮಾಡಿದ್ದ ಆಲ್ ಒಕೆ ಅಲೋಕ್ ಹಾಗು ರಾಹುಲ್ ಡಿಟ್ಟೋ ಈಗ ಹಾಡಿನ ಮೂಲಕವೇ ಕಚ್ಚಾಡಿಕೊಳ್ಳುತ್ತಿದ್ದಾರೆ. ರಾಹುಲ್ ಡಿಟ್ಟೋ ನಂಗನ್ಸಿದ್ ಹಾಡಿನ ಎರಡನೇ ಭಾಗ ಬಿಟ್ಟಿದ್ದು, ಈ ಹಾಡಿನಲ್ಲಿ ಆಲ್ ಒಕೆ ಅಲೋಕ್ಗೆ ರ್ಯಾಪ್  ಸಾಹಿತ್ಯದಲ್ಲೇ ಕಾಲೆಳೆದಿದ್ದಾರೆ.