ಪುನೀತ್ ಎಂದಿಗೂ ಅಮರ: 'ಯುವರತ್ನ'ನ ನೆನೆದು ಕಣ್ಣೀರಿಟ್ಟ ಕರುನಾಡು
ಅಪ್ಪು ಅಗಲಿ ಒಂದು ವರ್ಷ ಕಳೆದಿದ್ದು, ರಾಜ್ಯದ ಉದ್ದಗಲದಲ್ಲಿ ಅವರ ಪುಣ್ಯಸ್ಮರಣೆ ಮಾಡಲಾಗಿದೆ. ವಿಶೇಷ ಪೂಜೆ ಸಲ್ಲಿಸಿ ನಮನ ಸಲ್ಲಿಸಲಾಗಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಒಂದು ವರ್ಷ ಕಳೆದಿದ್ದು, ಅಪ್ಪು ಮೊದಲ ಪುಣ್ಯಸ್ಮರಣೆ ಮಾಡಲಾಗಿದೆ. ಯುವರತ್ನನನ್ನು ನೆನೆನಪಿಸಿಕೊಂಡು ಇಡೀ ಕರುನಾಡೇ ಕಣ್ಣೀರಿಟ್ಟಿದೆ. ನಿಷ್ಕಲ್ಮಶ ನಗುವಿನರಸನಿಗೆ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ಕೈ ಮುಗಿದಿದ್ದಾರೆ. ಜನಮನ ಗೆದ್ದ ನಟನಿಗೆ ದೇವರ ಸ್ಥಾನ ಕೊಟ್ಟಿದ್ದಾರೆ ರಾಜ್ಯದ ಜನತೆ. ಪುನೀತ್ ತಮ್ಮ ಒಳ್ಳೆತನದ ವ್ಯಕ್ತಿತ್ವದಿಂದ ದೇವರಾಗಿದ್ದಾರೆ.