KGF ಎಫೆಕ್ಟ್; ಗಣೇಶ ಕೂರಿಸಲು ನರಾಚಿ ಸೆಟ್ ಹಾಕಿದ ಅಭಿಮಾನಿಗಳು, ವಿಡಿಯೋ ವೈರಲ್
ಹೈದ್ರಾಬಾದ್ ಮಾರ್ಕೆಟ್ ನಲ್ಲಿ ಕೆಜಿಎಫ್ ಗಣೇಶ ಕೂಡ ಎಂಟ್ರಿಕೊಟ್ಟಿದ್ದಾರೆ. ಗಣೇಶನ ಪಕ್ಕದಲ್ಲಿ ರಾಕಿಭಾಯ್‌ಗೂ ಜಾಗ ಕೊಡಲಾಗಿದೆ. ಈಗ ಗಣೇಶ ಕೆಜಿಎಫ್ ಕಿಂಗ್ ನ ಅಡ್ಡ ನರಾಚಿಗೆ ಎಂಟ್ರಿಕೊಟ್ಟಿದ್ದಾರೆ. ಅಭಿಮಾನಿಗಳು ಗಣೇಶನ ಕೂರಿಸಲು ನರಾಚಿ ಸ್ಟೈಲ್ ನಲ್ಲಿ ಸೆಟ್ ಹಾಕಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.
ಕೆಜಿಎಫ್, ಕೆಜಿಎಫ್, ಎಲ್ಲಿ ನೋಡಿದ್ರು ಎಲ್ಲಿ ಕೇಳಿದ್ರು ಈ ಸಿನಿಮಾದೇ ಹವಾ. ಅಷ್ಟರ ಮಟ್ಟಿಗೆ ಟ್ರೆಂಡ್ ಸೆಟ್ ಮಾಡಿಬಿಟ್ಟಿದೆ ಈ ಸಿನಿಮಾ. ಬಾಲಿವುಡ್ , ಟಾಲಿವುಡ್ , ಕಾಲಿವುಡ್ , ಮಾಲಿವುಡ್ ಕೊನೆಗೆ ಹಾಲಿವುಡ್ ನಲ್ಲೂ ಸಖತ್ ಸೌಂಡ್ ಮಾಡಿದ ಕೆಜಿಎಫ್ ಈಗ ಗಣೇಶನ ಜೊತೆಯಲ್ಲಿಯೂ ಸೌಂಡ್ ಮಾಡ್ತಿದೆ. ಹೈದ್ರಾಬಾದ್ ನಲ್ಲಿ ಕೆಜಿಎಫ್ ಸಿನಿಮಾಗೆ ಸಖತ್ ಹೈಪ್ ಸಿಕ್ಕಿತ್ತು, ಚಿತ್ರ ನೋಡಿ ಪ್ರೇಕ್ಷಕರು ವಾವ್ಹ್ ಎಂದಿದ್ರು. ಅದ್ರ ಹವಾ ಎಷ್ಟರ ಮಟ್ಟಿಗಿತ್ತು ಅಂದ್ರೆ ಹೈದ್ರಾಬಾದ್ ಮಾರ್ಕೆಟ್ ನಲ್ಲಿ ಕೆಜಿಎಫ್ ಗಣೇಶ ಕೂಡ ಎಂಟ್ರಿಕೊಟ್ಟಿದ್ದಾರೆ. ಗಣೇಶನ ಪಕ್ಕದಲ್ಲಿ ರಾಕಿಭಾಯ್‌ಗೂ ಜಾಗ ಕೊಡಲಾಗಿದೆ. ಈಗ ಗಣೇಶ ಕೆಜಿಎಫ್ ಕಿಂಗ್ ನ ಅಡ್ಡ ನರಾಚಿಗೆ ಎಂಟ್ರಿಕೊಟ್ಟಿದ್ದಾರೆ. ಅಭಿಮಾನಿಗಳು ಗಣೇಶನ ಕೂರಿಸಲು ನರಾಚಿ ಸ್ಟೈಲ್ ನಲ್ಲಿ ಸೆಟ್ ಹಾಕಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.