Asianet Suvarna News Asianet Suvarna News

ದುನಿಯಾ ವಿಜಯ್ ಡೈರೆಕ್ಷನ್‌ ಕಲಿತಿದ್ದು ಯಾರಿಂದ? ಉಪ್ಪಿ ಹೇಳಿದ ಹಳೆ ಕತೆ!

Oct 14, 2021, 8:48 PM IST

ಬೆಂಗಳೂರು(ಅ. 14)  ದುನಿಯಾ ವಿಜಯ್ (Duniya Vijay) ನಟನೆ ಮತ್ತು ನಿರ್ದೇಶನದ ಸಲಗ (Salaga) ಸಿನಿಮಾ ಸಖತ್ ಓಪನಿಂಗ್ ಪಡೆದುಕೊಂಡಿದೆ. ಡೈಲಾಗ್ ಗಳ ಅಬ್ಬರ ಜನರಿಗೆ ಇಷ್ಟವಾಗಿದೆ.  ಒಂದಕ್ಕಿಂತ ಒಂದು ಡೈಲಾಗ್ ಗಳನ್ನು ಜನ ಮೆಚ್ಚಿಕೊಂಡಿದ್ದಾರೆ.

ಕೋಟಿಗೊಬ್ಬ ರಿಲೀಸ್ ಗೆ ವಿಘ್ನ ಬಂದಿದ್ದು ಯಾಕೆ?

ಕೊರೋನಾ (Coronavirus) ಕಾಲದ ನಂತರ ಸಲಗ ತೆರೆಗೆ ಬಂದಿದ್ದಾನೆ. ಸಲಗನ ಒಡ್ಡೋಲಗದಲ್ಲಿ ಗಣ್ಯರೆಲ್ಲ ಭಾಗವಹಿಸಿದ್ದರು.  ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah), ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ (Upendra) ಕಾರ್ಯಕ್ರಮದಲ್ಲಿ ಇದ್ದರು. ಇಡೀ ಚಿತ್ರರಂಗ ಒಂದು ಅದ್ದೂರಿ ಒಪನಿಂಗ್ ಗೆ ಕಾಯುತ್ತಿದೆ ಎಂದು ಉಪೇಂದ್ರ ಹೇಳಿದರು.