1992ರಲ್ಲಿ ಡಾ.ರಾಜ್ 'ಕರ್ನಾಟಕ ರತ್ನ' ಸ್ವೀಕರಿಸಿದ ವಿಡಿಯೋ ವೈರಲ್

30 ವರ್ಷಗಳ ಹಿಂದೆ ಡಾ.ರಾಜ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ವಿಧಾನಸೌಧದ ಮುಂಭಾಗದಲ್ಲಿ ಪ್ರಶಸ್ತಿ ನೀಡಲಾಗಿತ್ತು ಈ ವಿಡಿಯೋ ವೈರಲ್ ಈಗ ವೈರಲ್ ಆಗಿದೆ.

First Published Nov 1, 2022, 4:15 PM IST | Last Updated Nov 1, 2022, 4:16 PM IST

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಇಂದು (ನವೆಂಬರ್ 1) ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ವಿಧಾನಸೌಧದ ಮುಂಭಾಗದಲ್ಲಿ ನಡೆಯುವ ಸಮಾರಂಭದಲ್ಲಿ ಪವರ್ ಸ್ಟಾರ್ ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಗೌರವ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಡಾ.ರಾಜ್ ಕುಮಾರ್ ಅವರು ಕರ್ನಾಟಕ ರತ್ನ ಸ್ವೀಕರಿಸಿದ ವಿಡಿಯೋ ವೈರಲ್ ಆಗಿದೆ. 30 ವರ್ಷಗಳ ಹಿಂದೆ ಡಾ.ರಾಜ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ವಿಧಾನಸೌಧದ ಮುಂಭಾಗದಲ್ಲಿ ಪ್ರಶಸ್ತಿ ನೀಡಲಾಗಿತ್ತು. ಇದೀಗ 30 ವರ್ಷಗಳ ಬಳಿಕ ಮಗನಿಗೆ ಪ್ರಶಸ್ತಿ ನೀಡಲಾಗುತ್ತಿದೆ.