Asianet Suvarna News Asianet Suvarna News

ಬೆಳ್ಳಿತೆರೆಗೆ ಅಣ್ಣಾವ್ರ ಮೊಮ್ಮಗ ಧೀರೆನ್ ರಾಮ್ ಕುಮಾರ್; ಹೇಗಿದೆ ಶಿವ143?

ಡಾಕ್ಟರ್ ರಾಜ್ ಕುಮಾರ್ ಕುಟುಂಬದಿಂದ ಮತ್ತೊಬ್ಬ ಸ್ಟಾರ್ ಹುಟ್ಟಿಕೊಂಡಿದ್ದಾರೆ. ಈ ಭಾರಿ ಅಣ್ಣಾವ್ರ ಫ್ಯಾಮಿಲಿಯ ಮೂರನೇ ತಲೆಮಾರಿನ ಹೆಸರನ್ನ ಬೆಳ್ಳಿತೆರೆಯಲ್ಲಿ ಅಚ್ಚೊತ್ತಿರೋದು ಡಾ. ರಾಜ್  ಕುಮಾರ್ ಮತ್ತೊಬ್ಬ ಮೊಮ್ಮಗ ಧೀರೆನ್ ರಾಮ್ಕುಮಾರ್.

First Published Aug 27, 2022, 11:36 AM IST | Last Updated Aug 27, 2022, 11:36 AM IST

ಡಾಕ್ಟರ್ ರಾಜ್ ಕುಮಾರ್ ಕುಟುಂಬದಿಂದ ಮತ್ತೊಬ್ಬ ಸ್ಟಾರ್ ಹುಟ್ಟಿಕೊಂಡಿದ್ದಾರೆ. ಈ ಭಾರಿ ಅಣ್ಣಾವ್ರ ಫ್ಯಾಮಿಲಿಯ ಮೂರನೇ ತಲೆಮಾರಿನ ಹೆಸರನ್ನ ಬೆಳ್ಳಿತೆರೆಯಲ್ಲಿ ಅಚ್ಚೊತ್ತಿರೋದು ಡಾ. ರಾಜ್ಕುಮಾರ್ ಮತ್ತೊಬ್ಬ ಮೊಮ್ಮಗ ಧೀರೆನ್ ರಾಮ್ಕುಮಾರ್. ರಾಜ್ ಕುಮಾರ್ ಪುತ್ರಿ ಪೂರ್ಣಿಮಾ ಹಾಗು ಅಳಿಯ ರಾಮ್ ಕುಮಾರ್ ರ ಸುಪುತ್ರ ಧೀರೆನ್ ರಾಮ್ ಕುಮಾರ್ ಶಿವ143 ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಧೀರೆನ್ ರಾಮ್ ಕುಮಾರ್ ಸಿನಿ ಜರ್ನಿಯಲ್ಲಿ ಗೋಲ್ಡನ್ ಸ್ಟೆಪ್ಸ್ ಇಟ್ಟಿದ್ದಾರೆ. ಯಾಕಂದ್ರೆ ಧೀರೆನ್ಗೆ ರಾಜ್ ಕುಮಾರ್ ಕುಟುಂಬದ ಅಭಿಮಾನಿಗಳ ಬೆಂಬಲ ಸಿಕ್ಕಿದೆ. ದೊಡ್ಮನೆ ಅಭಿಮಾನಿಗಳು ಶಿವ  143 ಸಿನಿಮಾವನ್ನ ಗ್ರ್ಯಾಂಡ್ ಆಗಿ ವೆಲ್ಕಮ್ ಮಾಡಿದ್ದಾರೆ. ಧೀರೆನ್ ರಾಮ್ ಕುಮಾರ್ ಮೊದಲ ಹೆಜ್ಜೆ ಶಿವ143 ಸಿನಿಮಾ ನೋಡೋಕೆ ಅಣ್ಣಾವ್ರ ಕುಟುಂಬ ಚಿತ್ರಮಂದಿರಕ್ಕೆ ಬಂದಿದ್ರು. ಪೂರ್ಣಿಮಾ ರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ನಿವೇದಿತಾ ಶಿವರಾಜ್ ಕುಮಾರ್, ಧನ್ಯಾ ರಾಮ್ ಕುಮಾರ್, ಹಾಗು ಧೀರೆನ್ ರಾಮ್ ಕುಮಾರ್ ಅಭಿಮಾನಿಗಳ ಜೊತೆ ಕೂತು ಸಿನಿಮಾ ನೋಡಿದ್ರು. ಶಿವ 143 ಸಿನಿಮಾದ ಮಾಸ್ ಲವ್ ಸ್ಟೋರಿಯ ಚಿತ್ರ. ಧೀರೆನ್ ಹಾಗು ಮಾನ್ವಿತಾ ಕಾಮತ್ ಜೋಡಿ ಈ ಸಿನಿಮಾದಲ್ಲಿ ಅಕ್ಷರಶಃ ಮೋಡಿ ಮಾಡಿದೆ. ತೆಲುಗು ಭಾಷೆಯ ಆರ್ಎಕ್ಸ್ 100 ಸಿನಿಮಾದ ರಿಮೇಕ್ ಈ ಶಿವ 143. ಸಿನಿಮಾದಲ್ಲಿ ಧೀರೆನ್ ಪಾಗಲ್ ಪ್ರೇಮಿಯಾಗಿ ನಟಿಸಿದ್ದಾರೆ.

Video Top Stories