ಸ್ಯಾಂಡಲ್‌ವುಡ್‌ಗೆ ಅಣ್ಣಾವ್ರ ಮೊಮ್ಮಗ ಎಂಟ್ರಿ; ಶಿವ143 ಮಿಸ್ ಮಾಡದಿರಲು ಇವೆ ಕಾರಣಗಳು
ದೊಡ್ಮನೆಯ ಧೀರ ಧೀರೆನ್ ರಾಮ್ ಕುಮಾರ್ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡ್ತಿದ್ದಾರೆ. ಧೀರೆನ್ ಗ್ರಾಂಡ್ ಎಂಟ್ರಿಗೆ ಎಲ್ಲವೂ ಸಿದ್ದವಾಗಿದ್ದು ಶಿವನಾಗಿ ದೊಡ್ಮನೆಯ ಮೊಮ್ಮಗನನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತುರರಾಗಿದ್ದಾರೆ.
ದೊಡ್ಮನೆಯ ಧೀರ ಧೀರೆನ್ ರಾಮ್ ಕುಮಾರ್ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡ್ತಿದ್ದಾರೆ. ಧೀರೆನ್ ಗ್ರಾಂಡ್ ಎಂಟ್ರಿಗೆ ಎಲ್ಲವೂ ಸಿದ್ದವಾಗಿದ್ದು ಶಿವನಾಗಿ ದೊಡ್ಮನೆಯ ಮೊಮ್ಮಗನನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತುರರಾಗಿದ್ದಾರೆ. ಧೀರೆನ್ ರಾಮ್ ಕುಮಾರ್ ಅಣ್ಣಾವ್ರ ಮೊಮ್ಮಗ ಅನ್ನೋ ಕಾರಣಕ್ಕೆ ಈ ಚಿತ್ರವನ್ನ ಮಿಸ್ ಮಾಡುವಂತಿಲ್ಲ ಹಾಗೂ ಹೊಸ ನಾಯಕ ಎಂಟ್ರಿ ಹೇಗಿರುತ್ತೆ ಅನ್ನೋ ಕುತೂಹಲ. ಶಿವ 143 ಟಾಲಿವುಡ್ ನಲ್ಲಿ ಸೂಪರ್ ಹಿಟ್ ಲಿಸ್ಟ್ ಸೇರಿರೋ ಆರ್ ಎಕ್ಸ್ 100 ಸಿನಿಮಾ ರಿಮೇಕ್. ಅಲ್ಲಿ ಹಿಟ್ ಆಗಿರೋ ಸಿನಿಮಾ ಕನ್ನಡದಲ್ಲಿ ಹೇಗಿರುತ್ತೆ ಅನ್ನೋ ಕುತೂಹಲ ಪ್ರೇಕ್ಷಕರಿಗೆ. ಇನ್ನು ಚಿತ್ರದ ಟೀಸರ್ ಮತ್ತು ಸಾಂಗ್ ಗಳು ಬಿಡುಗಡೆ ಆಗಿದ್ದು ಎರಡರಲ್ಲಿಯೂ ಧೀರೇನ್ ಪರ್ಫಾಮೆನ್ಸ್ ಸಖತ್ತಾಗಿದೆ. ಹಾಗಾಗಿ ಚಿತ್ರದಲ್ಲಿ ಧೀರೇನ್ ಆಕ್ಟಿಂಗ್ ಹೇಗಿರಲಿದೆ ಅನ್ನೋದನ್ನ ನೋಡಲೇಬೇಕು ಅಂತಿದ್ದಾರೆ ಫ್ಯಾನ್ಸ್ . ಒಟ್ಟಾರೆ ಶಿವ 143 ಸಿನಿಮಾ ಮಿಸ್ ಮಾಡದೇ ನೋಡಬೇಕು ಅನ್ನೋದು ಕನ್ನಡಿಗರ ಆಸೆ.