Asianet Suvarna News Asianet Suvarna News

ಡ್ರಗ್ಸ್ ಸೇವನೆ ಬಗ್ಗೆ ಗೊತ್ತಿಲ್ಲ..ಬಿಟ್ಟು ಬಿಡಿ.. ಸಂಜನಾ ತಾಯಿ ಕಣ್ಣೀರು

* ಮತ್ತೆ ನಟಿಯರಿಗೆ ಡ್ರಗ್ಸ್ ಕಂಟಕ
* ಸಂಜನಾ ಆಸ್ತಿ ಸಂಪಾದನೆ ಬಗ್ಗೆ ತನಿಖೆಯಾಗಬೇಕು
* ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಆಗ್ರಹ
*  ಕಣ್ಣೀರಾದ ಸಂಜನಾ ತಾಯಿ ರೇಷ್ಮಾ

ಬೆಂಗಳೂರು(ಆ. 24)  ಸ್ಯಾಂಡಲ್‌ವುಡ್ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿಗೆ ಮತ್ತೆ ಡ್ರಗ್ಸ್ ಸಂಕಷ್ಟ ಎದುರಾಗಿದೆ. ನಟಿಯರ ಡ್ರಗ್ಸ್ ಸತ್ಯ ಬಯಲಾಗಿದ್ದು, ಇಬ್ಬರು ನಟಿಯರು ಡ್ರಗ್ಸ್ ತೆಗೆದುಕೊಂಡಿರುವುದು ದೃಢಪಟ್ಟಿದೆ. ಜೈಲು ಸೇರಿ ಜಾಮೀನು ಮೇಲೆ ಹೊರಗೆ ಬಂದ ಇಬ್ಬರು ನಟಿಯರು ಮತ್ತೆ ಜೈಲು ಸೇರಲಿದ್ದಾರಾ ? ಡ್ರಗ್ಸ್ ಸೇವನೆ ಸಾಬೀತಾದರೆ ಶಿಕ್ಷೆ ಏನು ? ಎಂಬ ಎಲ್ಲ ಚರ್ಚೆ ಆರಂಭವಾಗಿದೆ.

ಸಂಜನಾ ಬಗ್ಗೆ ಇನ್ನೊಂದಿಷ್ಟು ಶಾಕಿಂಗ್ ಮಾಹಿತಿ ಕೊಟ್ಟ ಸಂಬರಗಿ

ಡ್ರಗ್ಸ್ ಸೇವನೆ ಸಾಬೀತಾದರೆ ಅವರಿಗೆ 1 ವರ್ಷದ ತನಕ ಜೈಲು ಹಾಗೂ 20 ಸಾವಿರ ರೂಪಾಯಿ ದಂಡ ವಿಧಿಸುವ ಸಾಧ್ಯತೆ ಇದೆ. ಡ್ರಗ್ಸ್ ಮಾರಾಟ ಮಾಡಿರುವುದು ಸಾಬೀತಾರೆ ಶಿಕ್ಷೆ ಇನ್ನೂ ಹೆಚ್ಚಾಗುತ್ತದೆ.  ಈ ನಡುವೆ ಡ್ರಗ್ಸ್ ಸೇವನೆ ಸಾಬೀತಾಗಿರುವ ವಿಚಾರ ನಮಗೆ ಗೊತ್ತಿಲ್ಲ..ನಮ್ಮನ್ನು ನಮ್ಮಷ್ಟಕ್ಕೆ ಬಿಟ್ಟು ಬಿಡಿ ಎಂದು ಸಂಜನಾ ತಾಯಿ ರೇಷ್ಮಾ ಕಣ್ಣೀರು ಹಾಕಿದ್ದಾರೆ.

Video Top Stories