Asianet Suvarna News Asianet Suvarna News

ರಾಕಿಂಗ್ ಸ್ಟಾರ್​​ರ 'ಟಾಕ್ಸಿಕ್' ಶೂಟಿಂಗ್ ಹೇಗೆ ನಡೆಯುತ್ತಿದೆ ಗೊತ್ತಾ?: ಯಶ್ ಎದುರು 7.8 ಅಡಿ ಎತ್ತರದ ವಿಲನ್!

ರಾಕಿಂಗ್ ಸ್ಟಾರ್ ಯಶ್​​ ಟಾಕ್ಸಿಕ್​​ ಕೆಲಸದಲ್ಲಿ ಫುಲ್ ಬ್ಯುಸಿ. ಹೀಗಾಗೆ ಟಾಕ್ಸಿಕ್​​ ಬಗ್ಗೆ ದಿನಕ್ಕೊಂದು ಟಾಕ್ಸ್​​​ ಏಳ್ತಾನೆ ಇರುತ್ತೆ. ಇದೀಗ ಟಾಕ್ಸಿಕ್ ಅಡ್ಡಾದಿಂದ ಹೊಸ ಸುದ್ದಿಯೊಂದು ಹಲ್​ಚೆಲ್​ ಎಬ್ಬಿಸುತ್ತಿದೆ. ಹಾಗಾದ್ರೆ ಟಾಕ್ಸಿಕ್ ಸೆಟ್​​​ನಲ್ಲಿ ಏನಾಗ್ತಿದೆ ಅಂತ ನೋಡೋಣ ಬನ್ನಿ. 

First Published Sep 1, 2024, 12:14 PM IST | Last Updated Sep 1, 2024, 12:21 PM IST

ರಾಕಿಂಗ್ ಸ್ಟಾರ್ ಯಶ್​​ ಟಾಕ್ಸಿಕ್​​ ಕೆಲಸದಲ್ಲಿ ಫುಲ್ ಬ್ಯುಸಿ. ಹೀಗಾಗೆ ಟಾಕ್ಸಿಕ್​​ ಬಗ್ಗೆ ದಿನಕ್ಕೊಂದು ಟಾಕ್ಸ್​​​ ಏಳ್ತಾನೆ ಇರುತ್ತೆ. ಇದೀಗ ಟಾಕ್ಸಿಕ್ ಅಡ್ಡಾದಿಂದ ಹೊಸ ಸುದ್ದಿಯೊಂದು ಹಲ್​ಚೆಲ್​ ಎಬ್ಬಿಸುತ್ತಿದೆ. ಹಾಗಾದ್ರೆ ಟಾಕ್ಸಿಕ್ ಸೆಟ್​​​ನಲ್ಲಿ ಏನಾಗ್ತಿದೆ ಅಂತ ನೋಡೋಣ ಬನ್ನಿ. ರಾಕಿಂಗ್ ಸ್ಟಾರ್ ಯಶ್​​ ರ ಟಾಕ್ಸಿಕ್​ ಮೇಲೆ ಈಗ ಎಲ್ಲರ ಕಣ್ಣು. ಸಿನಿಮಾ ಶೂಟಿಂಗ್ ಹೇಗು ಶುರುವಾಗಿದೆ. ಟಾಕ್ಸಿಕ್​ ಸೆಟ್​​ನಿಂದ ಏನಾದ್ರು ಅಪ್ಡೇಟ್​ ಬರುತ್ತೆ ಅಂತ ರಾಕಿ ಫ್ಯಾನ್ಸ್​ ಕಾಯುತ್ತಲೇ ಇರ್ತಾರೆ. ಅವರಿಗಾಗೆ ಟಾಕ್ಸಿಕ್ ಸೆಟ್​​ನಿಂದ ಭರ್ಜರಿ ಸುದ್ದಿಯೊಂದು ಹೊರ ಬಂದಿದೆ. ಟಾಕ್ಸಿಕ್ ಸಿನಿಮಾದ ಕೆಲಸ ಕಾರ್ಖಾನೆಯಲ್ಲಿ ನಡೆದಂತೆ ನಡೆಯುತ್ತಿದೆಂತೆ. ದಿನವೊಂದಕ್ಕೆ ಬರೋಬ್ಬರಿ 60 ರಿಂದ 70 ಲಕ್ಷ ಖರ್ಚು ಮಾಡುತ್ತಿದೆಂತೆ ಪ್ರೊಡಕ್ಷನ್ ಹೌಸ್. ಟಾಕ್ಸಿಕ್​​ ಹಾಲಿವುಡ್​ ರೇಂಜ್​ ಸಿನಿಮಾ. ಈ ಸಿನಿಮಾದಲ್ಲಿ ಪ್ರಪಂಚದ ಚಿತ್ರ ಜಗತ್ತಿನ ಟಾಪ್​ ಟೆಕ್ನೀಷಿಯನ್ಸ್​ಗಳೆಲ್ಲಾ ಕೆಲಸ ಮಾಡುತ್ತಿದ್ದಾರೆ. ಹಾಲಿವುಡ್​​ನಿಂದ ಹಿಡಿದು, ಭಾರತದ ಟಾಪ್ ಮೋಸ್ಟ್ ಕಲಾವಿಧರು ನಟಿಸುತ್ತಿದ್ದಾರೆ. 

ಬೆಂಗಳೂರಿನ ಹೆಚ್​ಎಂಟಿ ಫ್ಯಾಕ್ಟರಿಯಲ್ಲಿ ನಡೀತಿರೋ ಶೂಟಿಂಗ್ ಸೆಟ್​​ನಲ್ಲಿ 22 ಕ್ಯಾರಾವಾನ್​ಗಳು ನಿಂತಿವೆಯಂತೆ. ದಿನವೊಂದಕ್ಕೆ ಬರೋಬ್ಬರಿ 500 ಕ್ಕು ಹೆಚ್ಚು ಜನ ಜ್ಯೂನಿಯರ್ ಆರ್ಟಿಸ್ಟ್​​ಗಳು ಕೆಲಸ ಮಾಡುತ್ತಿದ್ದಾರಂತೆ. ಟಾಕ್ಸಿಕ್​​ನಲ್ಲಿ ಯಶ್​​ ಜೊತೆ ಬ್ರಿಟೀಷ್ ನಟ ಡ್ಯಾರೆಲ್ ಡಿಸಿಲ್ವಾ, ಬಾಲಿವುಡ್​ ಬ್ಯೂಟಿ ಕಿಯಾರಾ ಅಡ್ವಾನಿ, ಸೌತ್​ ಲೇಡಿ ಸೂಪರ್ ಸ್ಟಾರ್ ನಯನತಾರಾ, ಹುಮಾ ಕುರೇಶಿ, ತಾರಾ ಸುಥಾರಿ, ಹಾಟಿ ಶೃತಿ ಹಾಸನ್ ಟಾಕ್ಸಿಕ್​ ನಟಿಸುತ್ತಿರೋದು ಪಕ್ಕಾ ಆಗಿದೆ. ಈಗ ಮತ್ತೊಂದು ಬಿಗ್ ಬ್ಯಾಂಗಿಂಗ್ ಸುದ್ದಿ ಅಂದ್ರೆ, ಈ ಸಿನಿಮಾದಲ್ಲಿ ಜಮ್ಮು ಕಾಶ್ಮೀರದ ದಿ ಗ್ರೇಟ್​ ಕಲಿ ಅಂತ ಕರೆಸಿಕೊಳ್ಳೋ 7.8 ಎತ್ತರದ ನಟ ಸುನಿಲ್ ಕುಮಾರ್ ನಟಿಸುತ್ತಿದ್ದಾರಂತೆ. ಜಮ್ಮು ಕಾಶ್ಮೀರದಲ್ಲಿ ಸುನಿಲ್ ಕುಮಾರ್ ತುಂಬಾನೆ ಫೇಸ್ ಆಗದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದಾರೆ. ಆದರೆ, ಸುನಿಲ್ ಕುಮಾರ್ ಒಬ್ಬ ಕಲಾವಿದ ಕೂಡ ಆಗಿದ್ದಾರೆ. ಸೂಪರ್ ಹಿಟ್ ಸ್ತ್ರೀ-2 ಚಿತ್ರದಲ್ಲಿ ಸರ್ಕಟ ಹೆಸರಿನ ವಿಲನ್ ರೋಲ್ ಮಾಡಿದ್ದಾರೆ. ಈಗ ಟಾಕ್ಸಿಕ್​ ಸಿನಿಮಾದಲ್ಲಿ ಈ ಗ್ರೇಟ್​ ಖಲಿ ಸುನೀಲ್​ ಕುಮಾರ್​ಗೆ ಆಫರ್​ ಬಂದಿದೆ. ಒಟ್ನಲ್ಲಿ ಯಶ್​ರ ಟಾಕ್ಸಿಕ್ ಹಲವು ವಿಶೇಷತೆಗಳ ಹೂರಣ ಅನ್ನೋದ್ರಲ್ಲಿ ನೋ ಡೌಟ್.

Video Top Stories