Asianet Suvarna News Asianet Suvarna News

ಓಡ್ರೋ ಓಡ್ರೋ ಇದು ಸರ್ಜಾ ಅಡ್ಡ ಅಂತ ಫ್ಯಾನ್ಸ್​ ಮತ್ತೊಮ್ಮೆ ಹೇಳೋ ಹಾಗೆ ಮಾಡ್ತಿದೆ ಮಾರ್ಟಿನ್ ಸಿನಿಮಾ!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾರ್ಟಿನ್​ ಬಿಗ್ ಓಪನಿಂಗ್ ಪಡೆದಿದೆ. ಆದ್ರೆ ಪ್ಯಾನ್ ಇಂಡಿಯಾದಲ್ಲಿ ಬಂದ ಮಾರ್ಟಿನ್​​ಗೆ ಬಾಕ್ಸಾಫೀಸ್​ ನಲ್ಲಿ ದೊಡ್ಡ ಟಾಸ್ಕ್​ ಇತ್ತು. ಅದು ಸೂಪರ್ ಸ್ಟಾರ್ ರಜನಿಯ ವೆಟ್ಟೈಯಾನ್ ಸಿನಿಮಾದ ಎದುರು ಮಾರ್ಟಿನ್ ಗೆಲ್ಲಬೇಕಿತ್ತು.

First Published Oct 13, 2024, 10:54 AM IST | Last Updated Oct 13, 2024, 10:54 AM IST

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾರ್ಟಿನ್​ ಬಿಗ್ ಓಪನಿಂಗ್ ಪಡೆದಿದೆ. ಆದ್ರೆ ಪ್ಯಾನ್ ಇಂಡಿಯಾದಲ್ಲಿ ಬಂದ ಮಾರ್ಟಿನ್​​ಗೆ ಬಾಕ್ಸಾಫೀಸ್​ ನಲ್ಲಿ ದೊಡ್ಡ ಟಾಸ್ಕ್​ ಇತ್ತು. ಅದು ಸೂಪರ್ ಸ್ಟಾರ್ ರಜನಿಯ ವೆಟ್ಟೈಯಾನ್ ಸಿನಿಮಾದ ಎದುರು ಮಾರ್ಟಿನ್ ಗೆಲ್ಲಬೇಕಿತ್ತು. ಹಾಗಾದ್ರೆ ಅದು ಸಾಧ್ಯ ಆಯ್ತಾ.? ಧ್ರುವ ರಜನಿಕಾಂತ್ ಎದುರು ಮಿಂಚಿದ್ರಾ..? ತಲೈವಾನ ವೆಟ್ಟೈಯಾನ್ ಫಸ್ಟ್ ಡೇ ಕರ್ನಾಟಕದಲ್ಲಿ ಎಷ್ಟು ಗಳಿಸ್ತು.? ಮಾರ್ಟಿನ್ ಮೊದಲ ದಿನ ಬಾಕ್ಸ್​ ಆಫೀಸ್​ನಲ್ಲಿ ಹೇಗೆ ವಿಜೃಂಭಿಸಿದೆ..?  ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಡ್ಡದಲ್ಲಿ ಸೆಲೆಬ್ರೇಷನ್ನೋ ಸೆಲೆಬ್ರೇಷನ್.. ದಸರಾ ಧಮಾಕದಂತೆ ಬಂದ ಮಾರ್ಟಿನ್, ಅದ್ಧೂರಿ ಹುಡುಗನ ಫ್ಯಾನ್ಸ್​ ಅದ್ಧೂರಿ ಹಬ್ಬ ಆಚರಿಸುವಂತೆ ಮಾಡಿದೆ. ಕರ್ನಾಟಕ ಚಿತ್ರಮಂದಿರಗಳ ತುಂಬೆಲ್ಲಾ ಮಾರ್ಟಿನ್ ಜೈ ಘೋಷ ಕೇಳಿಸುತ್ತಿದೆ. 

ಹಾಗಾದ್ರೆ ಮಾರ್ಟಿನ್​ ಬಾಕ್ಸಾಫೀಸ್​​ ಕಲೆಕ್ಷನ್​ ಹೇಗಿತ್ತು..? ಅಂತ ನೋಡಿದ್ರೆ ಬಹದ್ಧೂರ್ ಹುಡುಗನ ಭಕ್ತಗಣ ಕಾಲರ್ ಎತ್ಕೊಂಡು ಓಡಾಡೋದು ಪಕ್ಕಾ. ಮಾರ್ಟಿನ್​ ಸಿನಿಮಾ ಮೇಲೆ ಕನ್ನಡ ಸಿನಿ ಪ್ರೇಕ್ಷಕರಿಗೆ ಭಾರಿ ನಿರೀಕ್ಷೆ ಇತ್ತು. ಟ್ರೈಲರ್ ಟೀಸರ್ ಹಾಡು ಬಂದಾಗ್ಲೆ ಧ್ರುವ ಈ ಭಾರಿ ಮತ್ತೆ ಕಮಾಲ್ ಮಾಡುತ್ತಾರೆ. ಬಾಕ್ಸಾಫೀಸ್​ನಲ್ಲಿ ಗೆಲ್ಲುತ್ತಾರೆ ಅಂತೆಲ್ಲಾ ಪಡಸಾಲೆಯಲ್ಲಿ ಕೂತು ಮಾತಾಡುತ್ತಿದ್ರು. ಅದು ಈಗ ನಿಜ ಆಗಿದೆ. ಧ್ರುವ ಕರ್ನಾಟಕದಲ್ಲಿ ಫಸ್ಟ್​ ಡೇ ಬಾಕ್ಸಾಫೀಸ್​ನಲ್ಲಿ ಸಿಕ್ಸರ್​ ಭಾರಿಸಿದ್ದಾರೆ. ಕರ್ನಾಟಕದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್​ರ ವೆಟ್ಟೈಯಾನ್ ಸಿನಿಮಾಗೂ ಟಕ್ಕರ್ ಕೊಟ್ಟಿದ್ದಾನೆ ಮಾರ್ಟಿನ್.

Video Top Stories