ಸದ್ದು ಗದ್ದಲವಿಲ್ಲದೆ ಸೈಲೆಂಟ್ ಆಗಿದ್ದಾನಾ ದಿ ಶೋ ಮ್ಯಾನ್ಸ್ KD? ಧ್ರುವನ ಕಥೆ ಏನಾಯ್ತು?
ಮಾರ್ಟಿನ್ ಕೊಟ್ಟ ಶಾಕ್ ಆ್ಯಕ್ಷನ್ ಫ್ರಿನ್ಸ್ ಧ್ರುವ ಸರ್ಜಾಗೆ ನಂಬಲಾಗುತ್ತಿಲ್ಲ. ಯಾಕಂದ್ರೆ ಬಾಕ್ಸಾಫೀಸ್ನಲ್ಲಿ ಮಾರ್ಟಿನ್ ಮಹಾ ದಂಡಯಾತ್ರೆ ಮಾಡೋ ಬಲವಾದ ನಂಬಿಕೆ ಧ್ರುವಗಿತ್ತು. ಆದ್ರೆ ಹಾಗಾಗ್ಲಿಲ್ಲ. ಹಾಗಂತ ಧ್ರುವ ಕೈ ಕಟ್ಟಿ ಸುಮ್ಮನೇ ಕೂತಿಲ್ಲ. ಮತ್ತೊಂದು ಮಹಾ ಸಿನಿಮಾ ಕೆಡಿ ಅಡ್ಡ ಸೇರಿದ್ದಾರೆ.
ಕೆಡಿ ಮೇಲೆ ಸಿನಿ ಪ್ರೇಕ್ಷಕ ಕಣ್ಣಿಟ್ಟಿದ್ದಾನೆ. ಅದಕ್ಕೆ ಕಾರಣ ಡೈರೆಕ್ಟರ್ ಜೋಗಿ ಪ್ರೇಮ್ ಮಾಡಿರೋ ಮ್ಯಾಜಿಕ್. ಧ್ರುವನ ಕೈಗೆ ಲಾಂಗ್ ಇಟ್ಟು ರೆಟ್ರೋ ಸ್ಟೈಲ್ನಲ್ಲಿ ಮಾಸ್ ಅವತಾರ ಕೊಟ್ಟಿದ್ದು ಒಂದ್ ಕಡೆ ಆದ್ರೆ, ಕೆಜಿಎಫ್ನ ಅಧಿರ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್, ಕ್ರೇಜಿಸ್ಟಾರ್ ರವಿಚಂದ್ರನ್ ಕೆಡಿಯಲ್ಲಿ ಕಾಣಿಸಿಕೊಂಡಿದ್ದಾರೆ.