Asianet Suvarna News Asianet Suvarna News

ದಾಸನ​ ಸಿನಿ ಜೀವನ ನಿರ್ಧರಿಸುತ್ತಾ ಒಂದು ಕೊಲೆ?: ದರ್ಶನ್ ರಾಜಕೀಯಕ್ಕೆ ಬರುತ್ತಾರಂತೆ!

ಅಪ್ಪ ತೂಗುದೀಪ ಶ್ರೀನಿವಾಸ್​​ ದೊಡ್ಡ ಖಳನಟನಾಗಿ ಹೆಸರು ಮಾಡಿದ್ರು, ಅಪ್ಪನ ಹೆಸರು ಹೇಳದೇ ಸ್ವಂತ ಪ್ರತಿಭೆ ನಂಬಿ ಒಬ್ಬ ಲೈಟ್​ ಬಾಯ್ ಆಗಿ ಕೆಲಸ ಮಾಡಿಕಂಡು, ಸಪೋರ್ಟಿಂಗ್ ರೊಲ್​ ಮಾಡುತ್ತಾ ಹಿರೋ ಆದ ಮೆಟೀರಿಯಲ್ ನಟ ದರ್ಶನ್.

First Published Sep 1, 2024, 12:33 PM IST | Last Updated Sep 1, 2024, 12:33 PM IST

ನಟನೆ ರಕ್ತಗತವಾಗೇ ಬಂದಿದೆ. ಅಪ್ಪ ಮಹಾನ್​ ಖಳನಟ.. ತಮ್ಮ ದೊಡ್ಡ ನಿರ್ದೇಶಕ. ಇನ್ನು ದರ್ಶನ್​ ಕನ್ನಡಕ್ಕೆ ಸಿಕ್ಕಿದ್ದ ಸೂಪರ್ ಸ್ಟಾರ್. 60ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ಮಾಸ್​ ಹೀರೋ.. ಆದ್ರೆ ಆ ಒಂದು ಕೊಲೆ ದರ್ಶನ್​​ ಬಣ್ಣದ ಭವಿಷ್ಯವನ್ನೇ ಮುಗಿಸಿ ಬಿಡ್ತಾ..? ಹೌದು ಎನ್ನುತ್ತಿದೆ ಜೋತಿಷ್ಯ ಶಾಸ್ತ್ರ.. ಹಾಗಾದ್ರೆ ದರ್ಶನ್ ಮತ್ತೆ ಸಿನಿಮಾದಲ್ಲಿ ನಟಿಸಲ್ವಾ..? ಸಿನಿಮಾ ಬಿಟ್ಟು ದರ್ಶನ್​ಗೆ ಬದುಕೋಕೆ ಆಗುತ್ತಾ..? ಜೈಲಿನಲ್ಲಿರೋ ದಚ್ಚು ತನ್ನ ಸಿನಿ ಖರಿಯರ್​ ಬಗ್ಗೆ ಏನು ಹೇಳಿಕೊಳ್ಳುತ್ತಿದ್ದಾರೆ..? ಇಲ್ಲಿದೆ ನೋಡಿ ಫುಲ್ ಡಿಟೈಲ್ಸ್. ದರ್ಶನ್.. ಕನ್ನಡ ಬೆಳ್ಳಿತೆರೆ ಮೇಲೆ ಮಿನುಗುತ್ತಿದ್ದ ಮುನುಗುತಾರೆ. 

ಅಪ್ಪ ತೂಗುದೀಪ ಶ್ರೀನಿವಾಸ್​​ ದೊಡ್ಡ ಖಳನಟನಾಗಿ ಹೆಸರು ಮಾಡಿದ್ರು, ಅಪ್ಪನ ಹೆಸರು ಹೇಳದೇ ಸ್ವಂತ ಪ್ರತಿಭೆ ನಂಬಿ ಒಬ್ಬ ಲೈಟ್​ ಬಾಯ್ ಆಗಿ ಕೆಲಸ ಮಾಡಿಕಂಡು, ಸಪೋರ್ಟಿಂಗ್ ರೊಲ್​ ಮಾಡುತ್ತಾ ಹಿರೋ ಆದ ಮೆಟೀರಿಯಲ್ ನಟ ದರ್ಶನ್. ದರ್ಶನ್​ ಸ್ಯಾಂಡಲ್​ವುಡ್​​ನಲ್ಲಿ ತನ್ನದೇ ಬ್ರ್ಯಾಂಡ್ ಸೃಷ್ಟಿಸಿಕೊಂಡು ಬ್ಯಾಂಡ್​ ಬಾಜಾ ಭಾರಿಸುತ್ತಿದ್ರು. ಆದ್ರೆ ರೇಣುಕಾ ಸ್ವಾಮಿ ಒಂದು ಕೊಲೆ ದರ್ಶನ್​​ ಬ್ರ್ಯಾಂಡ್​ ವ್ಯಾಲ್ಯು ಕಳೆದುಕೊಳ್ಳೋ ಹಾಗೆ ಮಾಡಿದೆ. ದಚ್ಚು ಈಗ ಜೈಲು ಹಕ್ಕಿ. ಇನ್ನೇನು ಚಾರ್ಜ್ ಶೀಟ್ ಸಲ್ಲಿಕೆ ಆಗುತ್ತೆ. ದಾಸ ಆಚೆ ಬರ್ತಾನೆ. ಮತ್ತೆ ಆನೆ ನೆಡೆದಿದ್ದೇ ದಾರಿ, ಬಾಸ್ ಸಿನಿಮಾ ಮಾಡ್ತಾರೆ ಅಂತ ಫ್ಯಾನ್ಸ್​​ ಆಸೆಗಣ್ಣಿನ ಗೋಪುರ ಕಟ್ಟಿಕೊಂಡು ಕಾಯುತ್ತಿದ್ದಾರೆ. ಆದ್ರೆ ದರ್ಶನ್​​​ ಸಿನಿ ಖರಿಯರ್ ಎಂಡ್​ ಆಗುತ್ತೆ ಅನ್ನೋ ಬೆಂಕಿ ಬಿರುಗಾಳಿಯಂತಾ ಸುದ್ದಿಯೊಂದು ಸ್ಯಾಂಡಲ್​ವುಡ್​​ನ ಆವರಿಸಿದೆ. 

Video Top Stories