Asianet Suvarna News Asianet Suvarna News

ಭಾರತೀಯ ಚಿತ್ರರಂಗದಲ್ಲಿ ವಿಜಯ್ ಕಿರಗಂದೂರು ಹೊಂಬಾಳೆ ಸಾಮ್ರಾಜ್ಯ ಕಟ್ಟಿದ್ದು ಹೇಗೆ.?

ಭಾರತೀಯ ಚಿತ್ರರಂಗದದಲ್ಲಿ ಹೊಂಬಾಳೆ (Hombale Production) ಸಾಮ್ರಾಜ್ಯ ಸೃಷ್ಟಿಯಾಗಿದೆ. ಈ ಹೊಂಬಾಳೆ ಸಾಮ್ರಾಜ್ಯವನ್ನ ಕಟ್ಟೋಕೆ ವಿಜಯ್ ಕಿರಗಂದೂರು (Vijay Kiraganduru) ಪರಿಶ್ರಮ ಬಹ ದೊಡ್ಡದು.

ಭಾರತೀಯ ಚಿತ್ರರಂಗದದಲ್ಲಿ ಹೊಂಬಾಳೆ (Hombale Production) ಸಾಮ್ರಾಜ್ಯ ಸೃಷ್ಟಿಯಾಗಿದೆ. ಈ ಹೊಂಬಾಳೆ ಸಾಮ್ರಾಜ್ಯವನ್ನ ಕಟ್ಟೋಕೆ ವಿಜಯ್ ಕಿರಗಂದೂರು (Vijay Kiraganduru) ಪರಿಶ್ರಮ ಬಹ ದೊಡ್ಡದು. ನೆನಪಿರಲಿ ಪ್ರೇಮ್ ಹಾಗು ಕ್ವೀನ್ ರಮ್ಯಾ (Ramya) ಜೋಡಿಯಾಗಿ ನಟಿಸಿದ್ದ ಜೊತೆ ಜೊತೆಯಲಿ ಸಿನಿಮಾಕೆ ಕೋ ಪ್ರೊಡ್ಯೂಸರ್ ಆಗಿದ್ದ ವಿಜಯ್ ಕಿರಗಂದೂರು ಪೂರ್ಣ ಪ್ರಮಾಣದ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth rajkumar) 'ನಿನ್ನಿಂದಲೇ' ಸಿನಿಮಾ ಮೂಲಕ..

ಹೊಂಬಾಳೆ ಪ್ರಡಕ್ಷನ್ ಮಾಲೀಕ ವಿಜಯ್ ಕಿರಗಂದೂರು ರಾಜ್ ಕುಮಾರ್ (Dr Rajkumar)ಕುಟುಂಬದ ಅಪ್ಪಟ ಅಭಿಮಾನಿ. ಅದರಲ್ಲೂ ಪುನೀತ್ ರಾಜ್ ಕುಮಾರ್ ಅಂದ್ರೆ ವಿಜಯ್ ಕಿರಗಂದೂರುಗೆ ಪಂಚ ಪ್ರಾಣ. ಹೀಗಾಗಿ ನಿನ್ನಿಂದಲೇ ರಾಜಕುಮಾರ, ಹಾಗು ಯುವರತ್ನ ಸಿನಿಮಾಗಳನ್ನ ಹೊಂಬಾಳೆ ಬ್ಯಾನರ್ನಲ್ಲಿ ನಿರ್ಮಾಣ ಮಾಡಿದ್ದಾರೆ. ಆ ಮೂರು ಸಿನಿಮಾಗಳು ಬಣ್ಣದ ಜಗತ್ತಲ್ಲಿ ದೊಡ್ಡ ಹೆಸರು ಮಾಡಿದ್ವು.

ಚಿಕ್ಕಪ್ಪ ಅಪ್ಪುಗಾಗಿ ಸಿದ್ಧವಾಗಿದ್ದ ಕಥೆಯಲ್ಲಿ ಯುವರಾಜ್‌ ಕುಮಾರ್...!

ಹೊಂಬಾಳೆ ಪ್ರೊಡಕ್ಷನ್ ಇಂದು ಕನ್ನಡ ಚಿತ್ರರಂಗದ ದೊಡ್ಡ ಆಲದ ಮರದಂತೆ ಬೆಳೆದು ನಿಂತಿದೆ. ಈ ನಿರ್ಮಾಣ ಸಂಸ್ಥೆಯ ಮತ್ತೊಂದು ಹೆಗ್ಗಳಿಕೆ ಅಂದ್ರೆ ಬ್ಯಾಕ್ ಟು ಬ್ಯಾಕ್ ಪ್ಯಾನ್ ಇಂಡಿಯಾ ಸಿನಿಮಾಗಳನ್ನ ನಿರ್ಮಾಣ ಮಾಡುತ್ತಿರೋದು. ಯಶ್ ಜೊತೆ ಮಾಸ್ಟರ್ ಪೀಸ್ ಸಿನಿಮಾ ಮಾಡಿದ್ದ ನಿರ್ಮಾಪಕ ವಿಜಯ್ ಕಿರಗಂದೂರು, ನಂತ್ರ ಡೈರೆಕ್ಟ್ ಆಗಿ ಶೂಟ್ ಮಾಡಿದ್ದು ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಗುರಿಗೆ. ಆ ಗುರಿಯನ್ನ ಬೆನ್ನತ್ತಿ ಹೊರಟ ಹೊಂಬಾಳೆ ಬ್ಯಾನರ್ ಕೆಜಿಎಫ್, ಕೆಜಿಎಫ್-2 ಸಿನಿಮಾ ಮಾಡಿ ಇಡೀ ದೇಶ ವಿದೇಶಕ್ಕೆ ಹಂಚಿದೆ. ಈಗ ಪ್ರಭಾಸ್ ಜೊತೆ ಸಲಾರ್ ಅನ್ನೋ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದೆ.

ರಾಜ್ ಕುಟುಂಬಕ್ಕೂ ಹೊಂಬಾಳೆಗೂ ಬಿಡಿಸಲಾಗದ ಬಂಧ: ವಿಜಯ್ ಕಿರಗಂದೂರು ಹಿನ್ನಲೆ ಏನು ಗೊತ್ತಾ?

ಸಧ್ಯ ಹೊಂಬಾಳೆ ಪ್ರೊಡಕ್ಷನ್ನಲ್ಲಿ ರಿಶಬ್ ಶೆಟ್ಟಿ ಜತೆ ಕಾಂತಾರ, ಜಗ್ಗೇಶ್ ಜೊತೆ ರಾಘವೇಂದ್ರ ಸ್ಟೋರ್, ಹಾಗು ತಮಿಳು ನಿರ್ದೇಶಕಿ ಸುಧಾ ಕೊಂಗರ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈಗ ಯುವ ರಾಜ್ ಕುಮಾರ್ ಸಿನಿಮಾ ಸೇರಿಕೊಂಡಿದೆ. ಯುವ ರಾಜ್ ಕುಮಾರ್ ಹಿಂದೆ ರಣಧೀರ ಕಂಠೀರವ ಟೈಟಲ್ನಲ್ಲಿ ಸಿನಿಮಾ ಅನೌನ್ಸ್ ಮಾಡಿದ್ರು. ಆ ಟೈಟಲ್ ಟೀಸರ್ ಕೂಡ ರಿಲೀಸ್ ಆಗಿತ್ತು. ಆದ್ರೆ, ಕಾರಣಾಂತರಗಳಿಂದ ಆ ಸಿನಿಮಾ ತಡವಾಗ್ತಿದೆ. ಇದೀಗ ಕ್ರೇಜಿ ಕಾಂಬಿನೇಷನ್ನಲ್ಲಿ ರಾಘಣ್ಣನ ಕಿರಿ ಮಗ ಚಿತ್ರರಂಗಕ್ಕೆ ಆರಂಗೇಟ್ರಂ ಮಾಡ್ತಾರೆ.
 

Video Top Stories