'ಕೆಜಿಎಫ್ 3' ಬಗ್ಗೆ ಸೂಚನೆ ಕೊಟ್ರಾ ಛಾಯಾಗ್ರಾಹಕ ಭುವನ್ ಗೌಡ?

ಕೆಜಿಎಫ್ ..ಕೆಜಿಎಫ್ ..ಕೆಜಿಎಫ್...ಮಳೆ ನಿಂತು ಮಳೆ ಹನಿ ನಿಂತಿಲ್ಲ ಅನ್ನೋ ರೀತಿ ಕೆಜಿಎಫ್ ಸಿನಿಮಾ ರಿಲೀಸ್ ಆಗಿ ಹಿಟ್ ಲಿಸ್ಟ್ ಸೇರಿದ್ರು ಅದ್ರ ಬಗ್ಗೆ ಟಾಕ್ ಮಾತ್ರ ಕಮ್ಮಿ ಆಗಿಲ್ಲ. ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಕೆಜಿಎಫ್ ಕಾರ್ ಧೂಳೆಬ್ಬಿಸುತ್ತಿದೆ. 

First Published Aug 26, 2022, 3:24 PM IST | Last Updated Aug 26, 2022, 3:24 PM IST

ಕೆಜಿಎಫ್ ..ಕೆಜಿಎಫ್ ..ಕೆಜಿಎಫ್...ಮಳೆ ನಿಂತು ಮಳೆ ಹನಿ ನಿಂತಿಲ್ಲ ಅನ್ನೋ ರೀತಿ ಕೆಜಿಎಫ್ ಸಿನಿಮಾ ರಿಲೀಸ್ ಆಗಿ ಹಿಟ್ ಲಿಸ್ಟ್ ಸೇರಿದ್ರು ಅದ್ರ ಬಗ್ಗೆ ಟಾಕ್ ಮಾತ್ರ ಕಮ್ಮಿ ಆಗಿಲ್ಲ. ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಕೆಜಿಎಫ್ ಕಾರ್ ಧೂಳೆಬ್ಬಿಸುತ್ತಿದೆ. ಕೆಜಿಎಫ್ ಸಿನಿಮಾದಲ್ಲಿ ಸಾಕಷ್ಟು ಜನರಿಗೆ ಬ್ಯೂಟಿ ಅನ್ನಿಸಿದ್ದು ವಿಂಟೇಜ್ ಕಾರ್ ಗಳು ಮತ್ತು ಬೈಕ್. ಯೆಸ್ ವಾವ್ಹ್ ಎನ್ನಿಸುವ ಕಾರ್ ಗಳನ್ನ ಪ್ರಶಾಂತ್ ನೀಲ್ ಸಿನಿಮಾದಲ್ಲಿ ಬಳಸಿದ್ರು. ಒಂದಿಷ್ಟು ಬಾಡಿಗೆ ತಂದಿದ್ರೆ ಮತ್ತಷ್ಟು ಕಾರ್ ಮತ್ತು ಬೈಕ್ ಅನ್ನು ಖುದ್ದಾಗಿ ಅವ್ರೇ ರೆಡಿ ಮಾಡಿಸಿದ್ರು. ಆ ರೀತಿ ಆಲ್ಟ್ರೇಷನ್ ಮಾಡಿಸಿದ ಕಾರ್ ಗಳಲ್ಲಿ ಮುಸ್ತಂಗ್ ಕಾರ್  ಕೂಡ ಒಂದು. ಯೆಸ್ ಇದೇ. ಇದೇ ಕಾರ್ ನಲ್ಲಿ ಕೆಜಿಎಫ್ 2 ಚಿತ್ರದಲ್ಲಿ ನಾಯಕಿ ಕಿಡ್ನಪ್ ಆದಾಗ ರಾಕಿ ಎಂಟ್ರಿಕೊಡೋದು. ಈಗ ಅದೇ ಕಾರ್ ನ ವಿಡಿಯೋ ರಿಲೀಸ್ ಮಾಡಿ ಭುವನ್ ಗೌಡ ಕೆಜಿಎಫ್ 3 ಸಿನಿಮಾ ಮೇಲಿನ ಆಸೆಯನ್ನ ಮತ್ತಷ್ಟು ಹೆಚ್ಚು ಮಾಡಿದ್ದಾರೆ.