ಕಾಡಿನ ನಡುವೆ ನಡೆಯೋ ಥ್ರಿಲ್ಲಿಂಗ್ ಕಹಾನಿ: ಫಾರೆಸ್ಟ್ ಚಿತ್ರದ ಟ್ರೈಲರ್ಗೆ ಫ್ಯಾನ್ಸ್ ಫಿದಾ!
ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಹೊಂದಿರೋ, ಮಲ್ಟಿ ಸ್ಟಾರರ್ ಸಿನಿಮಾ "ಫಾರೆಸ್ಟ್" ಚಿತ್ರದ ಟೀಸರ್ ಹಾಗೂ ಹಾಡುಗಳು ಈಗಾಗಲೇ ಫ್ಯಾನ್ಸ್ ಮನ ಗೆದ್ದಿವೆ. ಈಗ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿದ್ದು, ಚಿತ್ರದ ಕುರಿತ ಕುತೂಹಲವನ್ನ ಡಬಲ್ ಮಾಡಿದೆ.
ಅಡ್ವೆಂಚರ್ಸ್ ಕಾಮಿಡಿ ಕಥಾಹಂದರ ಹೊಂದಿರೋ, ಮಲ್ಟಿ ಸ್ಟಾರರ್ ಸಿನಿಮಾ "ಫಾರೆಸ್ಟ್" ಚಿತ್ರದ ಟೀಸರ್ ಹಾಗೂ ಹಾಡುಗಳು ಈಗಾಗಲೇ ಫ್ಯಾನ್ಸ್ ಮನ ಗೆದ್ದಿವೆ. ಈಗ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿದ್ದು, ಚಿತ್ರದ ಕುರಿತ ಕುತೂಹಲವನ್ನ ಡಬಲ್ ಮಾಡಿದೆ. ಬನ್ನಿ ಹಾಗಾದ್ರೆ ಫಾರೆಸ್ಟ್ ಮೂವಿಯ ಟ್ರೈಲರ್ ಝಲಕ್ನೊಮ್ಮೆ ನೋಡ್ಕೊಂಡ್ ಬರೋಣ. ಫಾರೆಸ್ಟ್.. ಹೆಸರೇ ಹೇಳುವಂತೆ ಕಾಡಿನ ನಡುವೆ ನಡೆಯೋ ಥ್ರಿಲ್ಲಿಂಗ್ ಕಹಾನಿ. ಹಾಗಂತ ಇಲ್ಲಿ ಅಡ್ವೆಂಚರ್ ಅಷ್ಟೇ ಅಲ್ಲ ಹೊಟ್ಟೆ ಹುಣ್ಣಾಗುವಷ್ಟು ನಗಿಸೋ ಕಾಮಿಡಿಯೂ ಇದೆ.
ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು ಪ್ರಮುಖಪಾತ್ರದಲ್ಲಿ ನಟಿಸಿರೋ "ಫಾರೆಸ್ಟ್" ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಸಖತ್ ಸೌಂಡ್ ಮಾಡ್ತಾ ಇದೆ. ಟ್ರೈಲರ್ನಲ್ಲಿರೋ ಚಿನಕುರಳಿ ಸಂಭಾಷಣೆ, ನಗೆಯುಕ್ಕಿಸೋ ಸನ್ನಿವೇಶಗಳು ಎಲ್ಲರ ಮನಸು ಗೆಲ್ತಾ ಇವೆ. ಎನ್ ಎಂ ಕೆ ಸಿನಿಮಾಸ್ ಲಾಂಛನದಲ್ಲಿ ಎನ್ ಎಂ ಕಾಂತರಾಜ್ ನಿರ್ಮಿಸಿರೋ ಈ ಚಿತ್ರಕ್ಕೆ ಚಂದ್ರಮೋಹನ್ ಆಕ್ಷನ್ ಕಟ್ ಹೇಳಿದ್ದಾರೆ. ಸತ್ಯಶೌರ್ಯ ಸಾಗರ್ ಸಂಭಾಷಣೆ ಚಿತ್ರಕ್ಕಿದೆ. ತನ್ನ ಟ್ರೈಲರ್ ನಿಂದ ಎಲ್ಲರ ಮನಸು ಗೆಲ್ತಾ ಇರೋ ಫಾರೆಸ್ಟ್ ಮೂವಿ ಸದ್ಯದಲ್ಲೇ ಥಿಯೇಟರ್ ಅಂಗಳಕ್ಕೆ ಬರಲಿದೆ.